ಸುಮಾರು 70 ವರ್ಷದ ವೃದ್ದೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಯಚೂರು ನಗರದ ಸ್ಟೇಷನ್ ಬಜಾರ್ ಏರಿಯಾದ ಗೂಡ್ ಶೆಡ್ ಬಳಿ ನಡೆದಿದೆ. ಕೊಲೆ ಮಾಡಿದವರು ಹಾಗೂ ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಸುದ್ಡಿ ಓದಿದ್ದೀರಾ? ರಾಯಚೂರು | ನೀರಿನ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿ ಸಾವು; ಕುಟುಂಬಸ್ಥರ ಆಕ್ರಂದನ
ಘಟನಾ ಸ್ಥಳಕ್ಕೆ ರೈಲ್ವೆ ಹಾಗೂ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.
ನಗರದಲ್ಲಿ ಒಂದು ವಾರದ ಹಿಂದೆಯೂ ಕೂಡ ಹಾಡುಹಗಲೇ ಕೊಲೆ ಪ್ರಕರಣ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತವಾಗಿ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕು. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಡಬೇಕೆಂದು ಮನವಿ ಮಾಡಿದ್ದಾರೆ.