ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶಂಕ್ರಪ್ಪ ಚಿನ್ನಪ್ಪ ಶಿರನಹಳ್ಳಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ನೂತನವಾಗಿ ಆಯ್ಕೆಯಾದ ಅವರಿಗೆ ದೊಡ್ಡೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಚಂದ್ರಶೇಖರ ಈಳಿಗೇರ ಸನ್ಮಾನಗೈದು ಗೌರವಿಸಿದರು. ಸೂರಣಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಮಾರ್ಚ್ 3ರ ಬುಧವಾರದಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಪಂಚಾಯತಿಯಲ್ಲಿ ಒಟ್ಟು 20 ಸದಸ್ಯರಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸೂರಣಗಿ ಗ್ರಾಮದ ಮಾಜಿ ಸದಸ್ಯ ಶರಣಪ್ಪ ಇಚ್ಚಂಗಿ, ದುದ್ದುಸಾಹೇಬ್ ಗೊನಾಳ, ಹಾಗೂ ಸೂರಣಗಿ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯ ಬಾಬಣ್ಣ ಲಮಾಣಿ, ಖಾದ್ರಿ ಭಾಷಾ ಕೊರವಗೇರಿ, ದಾವಲಸಾಬ ತಬ್ಬಲ, ದೊಡ್ಡೂರ ಗ್ರಾಮ ಪಂಚಾಯಿತಿ ಸದಸ್ಯ ಶಂಕ್ರಣ್ಣ ಲಮಾಣಿ, ಉಳ್ಳಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಲಮಾಣಿ, ದೊಡ್ಡೂರ ಗ್ರಾಮದ ಹನಮಂತಪ್ಪ ಮಕರಬ್ಬಿ, ಸುಲ್ತಾನಪೂರ ಗ್ರಾಮದ ಹನಮಂತಪ್ಪ ದೊಡ್ಡಮನಿ, ರವಿ ಭಜಕ್ಕನವರವರ, ಪ್ರಕಾಶ್ ಮಕರಬ್ಬಿ ಇದ್ದರು.
ವರದಿ: ಮಲ್ಲೇಶ ಮಣ್ಣಮ್ಮನವರ