ಚಿಕ್ಕಮಗಳೂರು l ಮಹಾಡ್ ಸತ್ಯಗ್ರಹ ನೆನಪಿನಲ್ಲಿ ಶೋಷಿತರ ಸಂಘರ್ಷ ಕಾರ್ಯಕ್ರಮ ಯಶಸ್ವಿ; ದಸಂಸ

Date:

Advertisements

ದಲಿತರಿಗೆ ಸಾರ್ವಜನಿಕ ಚವದಾರ್ ಕೆರೆಯ ನೀರನ್ನು ಕುಡಿಯುವ ಮತ್ತು ಬಳಸುವ ಅಧಿಕಾರ ಗಳಿಸಿಕೊಡಲು ಬಾಬಾಸಾಹೇಬ್ ಅಂಬೇಡ್ಕರ್ ಅವರು ನಡೆಸಿದ್ದ, ಚಳವಳಿಯನ್ನು ಚವದಾರ್ ಸತ್ಯಾಗ್ರಹ ಅಥವಾ ಮಹಾಡ್ ಸತ್ಯಾಗ್ರಹ ಎಂದು ಕರೆಯಲಾಗುತ್ತದೆ. 1927ರ ಮಾರ್ಚ್ 20ರಂದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡದಲ್ಲಿ ಜರುಗಿದ ಅತ್ಯಂತ ಮಹತ್ವಪೂರ್ಣ ಐತಿಹಾಸಿಕ ಘಟನೆಯಿದು. ಸಾವಿತ್ರಿ ನದಿ ದಡದಲ್ಲಿರುವ ಮಹಾಡ್ ಟೌನ್ ಐತಿಹಾಸಿಕ ಬೌದ್ಧ ನೆಲೆಯೂ ಆಗಿದೆ.

Screenshot 2025 03 21 19 34 45 33 7352322957d4404136654ef4adb64504

ಭಾರತದ ಅಸ್ಪೃಶ್ಯದ ಪ್ರತಿರೋಧ ಚಳುವಳಿ ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಶೋಷಿತರ ಸಂಘರ್ಷ ದಿನವಾಗಿ ರಾಜ್ಯಾದ್ಯಂತ ಎಲ್ಲೆಡೆ ದಸಂಸ ( ಅಂಬೇಡ್ಕರ್ ವಾದ ) ವತಿಯಿಂದ ಕಾರ್ಯಕ್ರಮವನ್ನು ನಡೆಸಿದ್ದಾರೆ, ಹಾಗೆಯೇ ಚಿಕ್ಕಮಗಳೂರು ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಗುರುವಾರ ಹಲವು ಸಂಘಟನೆಯವರ ಸಮ್ಮುಖದಲ್ಲಿ ಎಲ್ಲರನ್ನೂ ಹಾಗೂ ಮಹಿಳೆಯರನ್ನು ಒಳಗೊಂಡು ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಲಾಯಿತು.

ಸಣ್ಣ ಸಮುದಾಯಗಳ ಮುಖಂಡರು ರಾಜ್ಯಕ್ಕೆ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಬಹುಸಂಖ್ಯಾತರಾಗಿರುವ ದಲಿತರಿಗೆ ಮುಖ್ಯಮಂತ್ರಿಯ ಅವಕಾಶ ದೊರೆಯದಿರುವುದು ದುರಾದೃಷ್ಟಕರವಾಗಿದೆ. ಆಗಾಗಿ ಎಲ್ಲರೂ ಒಗ್ಗೂಡಿ ಅಧಿಕಾರ ಕಸಿದುಕೊಳ್ಳುವ ನಿಟ್ಟಿನಲ್ಲಿ ಚಳುವಳಿಗಳು ಸಧೃಡವಾಗಬೇಕು. ಈ ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ ಎಂಬುದನ್ನು ಜಗತ್ತಿಗೆ ಸಾರಲು ಬಾಬಾ ಸಾಹೇಬ್ ಡಾ.ಅಂಬೇಡ್ಕ‌ರ್  ನಡೆಸಿದ, ಐತಿಹಾಸಿಕ ಮಹಾಡ್ ಚಳುವಳಿ ದಲಿತ ಸಮುದಾಯದ ಚಳುವಳಿಗಳಿಗೆ ಸ್ಫೂರ್ತಿ ನೀಡಿದೆ.

Advertisements
Screenshot 2025 03 21 19 34 28 53 7352322957d4404136654ef4adb64504 1

ಸ್ವಾತಂತ್ರ್ಯಕ್ಕೂ ಮುನ್ನ ಪರಿಶಿಷ್ಟರ ಬದುಕು ಮೂರಾಬಟ್ಟೆಯಾಗಿತ್ತು. ಗ್ರಾಮದ ಬಾವಿಗೆ ಕೆರೆಗಳಲ್ಲಿ ನೀರು ಸೇವಿಸುತ್ತಿರಲಿಲ್ಲ, ನಡೆದಾಡುವ ಹಾದಿಯಲ್ಲಿ ಬೆನ್ನಿಂದ ಪರಕೆ ಕಟ್ಟಿಕೊಂಡು ಹೆಜ್ಜೆಗುರುತು ಸಿಗದಂತೆ ಗುಡಿಸಿಕೊಂಡು ಹೋಗುವ ಸ್ಥಿತಿಯಿತ್ತು. ಅಸ್ಪಶ್ಯರಾಗಿ ಬದುಕಿದ್ದವರಿಗೆ ಅಂಬೇಡ್ಕರ್, ಕತ್ತಲೆಯಿಂದ ಬೆಳಕಿನತ್ತ ಕಡೆ ಮಾರ್ಗ ತೋರಿಸಿದವರು, ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಕಾರ್ಯಕ್ರಮದಲ್ಲಿ ಮಾತಾಡಿದರು.

ಯಜಮಾನಿಕೆಯ ದಾಸ್ಯದ ಸುಳಿಯಲ್ಲಿ ಸಿಲುಕಿರುವ ಶೋಷಿತ ಸಮುದಾಯ. ಆ ಮನೋಸ್ಥಿತಿಯಿಂದ ಹೊರಬಾರದಿರುವುದು ದುರಾದೃಷ್ಟಕರ,  ಮಹಾಡ್ ಚಳುವಳಿಯ ಚರಿತ್ರೆ ವರ್ತಮಾನದ ಬದುಕಿಗಾಗಿ ನೆನಪಾಗಿದೆ. ಹಲವು ಭಾಗಗಳಲ್ಲಿ ಜಾತಿ ವ್ಯವಸ್ಥೆಯಿಂದ ಶೋಷಿತ ಸಮುದಾಯದ ಜನರಿಗೆ ಕೆರೆಯ ನೀರನ್ನು ಸಹ ಮುಟ್ಟಲು ಬಿಡದಂತಹ ಪರಿಸ್ಥಿತಿ ಇನ್ನೂ ಜೀವಂತವಾಗಿದೆ. ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿಕೊಳ್ಳುವ ಮೂಲಕ ರಾಜಕೀಯ ಶಕ್ತಿಗಳಿಸಿಕೊಳ್ಳಬೇಕೆಂದು ರವೀಶ್ ಕ್ಯಾತನಬೀಡು ತಿಳಿಸಿದರು. 

Screenshot 2025 03 21 19 33 45 06 7352322957d4404136654ef4adb64504

ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ನಡೆದ ಉಗ್ರ ಚಳುವಳಿಗಳ ಪರಿಣಾವಾಗಿ ರಾಜ್ಯದ ಶೋಷಿತ ಸಮುದಾಯಗಳಿಗೆ ಕಾಡಿಸುತ್ತಿದ್ದ ಮಲ ಹೊರುವ ಅನಿಷ್ಟ ಪದ್ಧತಿ, ಮತ್ತು ಬೆತ್ತಲೆ ಸೇವೆಯಂತಹ ಅಮಾನವೀಯ ಆಚರಣೆಗಳುಮುಕ್ತಗೊಂಡವು ಎಂದು ಹೇಳಿದ ಅವರು ಈ ವಿಚಾರಗಳಲ್ಲಿ ದಿವಂಗತ ಮಾಜಿ ಸಚಿವ ಬಿ.ರಾಚಯ್ಯನವರ ಪಾತ್ರ ಮುಖ್ಯವಾದದ್ದು, ಎಂದು ಹೆಚ್ ಹೆಚ್ ದೇವರಾಜು ಮಾತಾಡಿದರು.

ದಲಿತರೂ ಶೋಷಿತರನ್ನು ಹಿಂದೂ ಧರ್ಮದೊಳಗೆ ಧಾರ್ಮಿಕ ಮತ್ತು ಸಾಮಾಜಿಕವಾಗಿ ಹೊರಗಿಟ್ಟಿರುವ ವಿಚಾರವನ್ನು ಸಾಕ್ಷಿ ಸಹಿತ ಸಾಬೀತು ಮಾಡಲು ಮಹಾಡ್ ಮತ್ತು ಕಾಲಾರಾಮ್ ದೇವಾಲಯ ಪ್ರವೇಶ ಚಳುವಳಿಯಾಗಿದೆ. ದೇಶವನ್ನು ನೂರಾರು ವರ್ಷಗಳ ಮುಸಲ್ಮಾನ ದೊರೆಗಳು ಆಳ್ವಿಕೆ ನಡೆಸಿದರೂ ಆದರೆ ಹಿಂದೂ ಧರ್ಮದಲ್ಲಿದ್ದ ಅಸಮಾನತೆಯನ್ನು ತೊಡೆದುಹಾಕುವ ಗೋಜಿಗೆ ಹೋಗಿರಲಿಲ್ಲ. ಆದರೆ ಬ್ರಿಟೀಷ್‌ ಆಡಳಿತದಲ್ಲಿ ದೇಶದ ಎಲ್ಲಾ ಸಮುದಾಯಗಳಿಗೂ ಅನ್ವಯಿಸುವಂತೆ ಶಿಕ್ಷಣ ಕಾಯ್ದೆ,ಭೂಸುಧಾರಣಾ ಕಾಯ್ದೆ, ಮತದಾನದ ಹಕ್ಕು ನೀಡಲಾಯಿತು. ಬ್ರಿಟೀಷ್ ಸರ್ಕಾರದ ಮಹತ್ವದ ನಿರ್ಧಾರಗಳ ಹಿಂದೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರು ನಡೆಸಿದ ಚಳುವಳಿಗಳು ಮಹತ್ವದ ಪಾತ್ರ ನಿರ್ವಹಿಸಿವೆ ಎಂದು ಮಹಾಡ್ ಸತ್ಯಾಗ್ರಹದ ಬಗ್ಗೆ ವಿಚಾರ ಮಂಡಿಸಿ ಬಿ.ಎಸ್ಪಿ ಜಿಲ್ಲಾಧ್ಯಕ್ಷ ಪರಮೇಶ್ವರ್ ತಿಳಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಯಾಮರಣ ಕೋರಿ ಏಕಾಂಗಿ ಪ್ರತಿಭಟಿಸಿದ ರೈತ 

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್, ದಸಂಸ ತಾಲ್ಲೂಕು ತಾಲ್ಲೂಕು ಪ್ರಧಾನ ಸಂಚಾಲಕ ಮಂಜುನಾಥ್ ನಂಬಿಯಾರ್, ರಾಜ್ಯ ಸಮಿತಿ ಸದಸ್ಯ ಅಂಬುಗ ಮಲ್ಲೇಶ್, ಮರ್ಲೆ ಅಣ್ಣಯ್ಯ , ಜವರಯ್ಯ, ರಘು, ರಮೇಶ್, ಗೌಸ್ ಮಹದ್ದೀನ್, ಕೃಷ್ಣಮೂರ್ತಿ ಹಾಗೂ ಸಂಘಟಕರು, ಸಾಮಾಜಿಕ ಚಿಂತಕರು ಭಾಗವಹಿಸಿದರು.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X