ಶಾಲೆ ಮುಗಿಸಿಕೊಂಡು ಮನೆಗೆ ತೆರಳುವಾಗ ರೋಟರಿ ಶಾಲೆಯ ಸಿಬ್ಬಂದಿಗಳ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.
ಸಕಲೇಶಪುರ ಪಟ್ಟಣದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಎಂದಿನಂತೆ ಕೆಲಸ ಮುಗಿಸಿಕೊಂಡು ಸಂಜೆ ತೆರಳುವಾಗ ಹೆಜ್ಜೇನು ದಾಳಿ ಮಾಡಿದೆ.
ಭಾಸ್ಕರ್, ಕೋಮಲ, ಸೋಮಶೇಖರ್, ರವಿ, ಚೈತನ್ಯ, ಸಂಜಯ್, ಅಕ್ಷಯ್, ವಿಶ್ವನಾಥ್, ಹಾಗೂ ವರ್ಗಿಸ್, ಕೋಮಲ ಒಟ್ಟು 9 ಜನ ಶಿಕ್ಷಕರು ಹಾಗೂ ಸಿಬ್ಬಂದಿಗಳ ಮೇಲೆ ಹೆಜ್ಜೇನು ದಾಳಿಯ ಪರಿಣಾಮದಿಂದ ಗಾಯಗೊಂಡಿದ್ದರು. ತಕ್ಷಣವೇ, ಪಟ್ಟಣದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ l ನವಜಾತ ಶಿಶು ಮೃತ ದೇಹ ರಾಜಕಾಲುವೆಯಲ್ಲಿ ಪತ್ತೆ
ಕೋಮಲ ಅವರಿಗೆ ಹೆಜ್ಜೇನು ದಾಳಿಯಿಂದ ಹೆಚ್ಚು ಅಸ್ವಸ್ಥರಾಗಿದ್ದಾರೆಂದು ತಿಳಿದು ಬಂದಿದೆ.
