ಎಣ್ಣೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ 108 ಕ್ಕೆ ಕರೆ ಮಾಡಿ ಬಸ್ ನಿಲ್ದಾಣ ಬಳಿ ಗಲಾಟೆ ಆಗುತ್ತಿದೆ ಬೇಗ ಬನ್ನಿ, ಎಂದು ಸುಳ್ಳು ಹೇಳಿ ಆಂಬುಲೆನ್ಸ್ ಕರೆಸಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ಶೃಂಗೇರಿ ಹಾಗೂ ಕೊಪ್ಪ ತಾಲ್ಲೂಕಿನಲ್ಲಿ 108 ಆಂಬುಲೆನ್ಸ್ ಇರುವುದೇ ಕಡಿಮೆ. ಇದರ ಪರಿಣಾಮವಾಗಿ ಸುಮಾರು 45 ಕಿ. ಮೀ ದೂರವಿರುವ ಬಾಳೆಹೊನ್ನೂರು ಹೋಬಳಿಯಿಂದ 108 ಆಂಬುಲೆನ್ಸ್ ಬಂದಿದೆ. ಸ್ಥಳಕ್ಕೆ ಆಂಬುಲೆನ್ಸ್ ಸಿಬ್ಬಂದಿಗಳು ಬಂದು ನೋಡಿದಾಗ ಯಾವ ಗಲಾಟೆಯೂ ಇಲ್ಲ. ಅನಾರೋಗ್ಯ ಪೀಡಿತರಾಗಿರುವವರು ಇಲ್ಲವೆಂದು ತಿಳಿದಾಗ, ಕುಡುಕನ ಹುಚ್ಚಾಟಕ್ಕೆ ಸಿಬ್ಬಂದಿಗಳಿಗೆ ಸಮಯ ವ್ಯರ್ಥಮಾಡಿದಂತಾಗಿದೆ.
ಈ ಘಟನೆ ಕುರಿತು ಆಂಬುಲೆನ್ಸ್ ಸಿಬ್ಬಂದಿಗಳು 112ಕ್ಕೆ ಕರೆ ಮಾಡಿ ವಿಚಾರ ತಿಳಿಸಿದಾಗ, ಪೊಲೀಸರು ಕುಡಿತ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದಾಗ ನಾನು ಭೂಮಿ ಮೇಲೆ, ಆಕಾಶದ ಕೆಳಗೆ ಇದ್ದೀನಿ.. ತಾಕತ್ತಿದ್ರೆ ನನ್ನ ಹಿಡೀರಿ ನೋಡೋಣ’ ಎಂದು ಪೊಲೀಸರಿಗೆ ಸವಾಲು ಹಾಕಿದ್ದಾನೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಹಾಡ್ ಸತ್ಯಗ್ರಹ ನೆನಪಿನಲ್ಲಿ ಶೋಷಿತರ ಸಂಘರ್ಷ ಕಾರ್ಯಕ್ರಮ ಯಶಸ್ವಿ; ದಸಂಸ
ಪೊಲೀಸರು ಹಾಗೂ ಸ್ಥಳೀಯರು ಹುಡುಕಿದರೂ ಕೆಲವು ಕಾಲ ವ್ಯಕ್ತಿ ಸಿಕ್ಕಿರಲಿಲ್ಲ. ನಂತರ ಶೃಂಗೇರಿ ಪಟ್ಟಣದ ವೈನ್ ಅಂಗಡಿ ಬಳಿ ಇದ್ದ, ಪಟ್ಟಣದ ಆಟೋ ಚಾಲಕರು ಕುಡುಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
