ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿಗರು ಹಲ್ಲೆ ನಡೆಸಿರುವುದನ್ನು ಸೇರಿದಂತೆ ವಿವಿಧ ಘಟನೆಗಳನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದ ಗುಂಪು ಶನಿವಾರ ‘ಕರ್ನಾಟಕ ಬಂದ್’ಗೆ ಕರೆ ನೀಡಿದೆ. ಮೈಸೂರಿನಲ್ಲಿ ಬಸ್ ಓಡಾಟ ತಡೆದ ಕನ್ನಡಪರ ಸಂಘಟನೆಗಳ ಮುಖಂಡರನ್ನು ಬಂಧಿಸಲಾಗಿದೆ.
ಬಂದ್‌ಗೆ ಓಲಾ, ಉಬರ್ ಡ್ರೈವರ್ಸ್ ಆಂಡ್ ಓನರ್ಸ್ ಅಸೋಸಿಯೇಷನ್, ಆಟೋ ರಿಕ್ಷಾ ಚಾಲಕರ ಸಂಘಟನೆಗಳು ಬೆಂಬಲಿಸಿದೆ. ಆದರೆ ಕೆಎಸ್‌ಆರ್‌ಟಿಸಿ, ಮೆಟ್ರೋ ಬೆಂಬಲ ಸೂಚಿಸಿಲ್ಲ. ಕೆಲವು ಹೋಟೆಲ್ ಮಾಲೀಕರು ಮಾತ್ರ ಬೆಂಬಲ ನೀಡಿ ಹೋಟೆಲ್ ಬಂದ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಸರ್ಕಾರ ಕರೆದ ಸಭೆಗೆ ಹಾಜರಾಗಲು ಪಂಜಾಬ್ ರೈತ ಸಂಘಗಳು ನಕಾರ
ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಎಂದಿನಂತೆ ಬಸ್ ಇತರೆ ವಾಹನಗಳ ಓಡಾಟ ಕಂಡುಬಂದಿದೆ. ಮೈಸೂರಿನಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರು ಬಸ್ ತಡೆಯಲು ಪ್ರಯತ್ನಿಸಿದ್ದು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಸ್ ನಿಲ್ದಾಣ ಮತ್ತು ಮೈಸೂರು ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
