ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ನಾಯಕ ದಿಲೀಪ್ ಘೋಷ್ ಶುಕ್ರವಾರ ಪ್ರತಿಭಟನಾನಿರತ ಮಹಿಳೆಯರ ಗುಂಪಿನೊಂದಿಗೆ ತೀವ್ರ ವಾಗ್ವಾದ ನಡೆಸಿದ್ದು, “ಕಿರುಚಬೇಡಿ, ನಿಮ್ಮ ಕತ್ತು ಹಿಸುಕುತ್ತೇನೆ” ಎಂದು ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ.
ಮಹಿಳೆಯರು ಕ್ಷೇತ್ರದ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ದಿಲೀಪ್ ಘೋಷ್ ಸಂಸದರಾಗಿದ್ದ ಸಂದರ್ಭದಲ್ಲಿ ಒಮ್ಮೆಯೂ ಕ್ಷೇತ್ರದಲ್ಲಿ ನೋಡಿಲ್ಲ ಎಂದು ಮಹಿಳೆಯರು ದೂರಿದರು.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಪಿಎಸ್ಐ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ
ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ರಸ್ತೆ ಉದ್ಘಾಟನೆಯ ಸಂದರ್ಭದಲ್ಲಿ ಈ ಘರ್ಷಣೆ ಸಂಭವಿಸಿದೆ. ಸ್ಥಳೀಯ ಮಹಿಳೆಯರು ಮಾಜಿ ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದು, ತೀವ್ರ ವಾಗ್ವಾದ ಏರ್ಪಟ್ಟಿತು. ದಿಲೀಪ್ ಘೋಷ್ ಅವಾಚ್ಯ ಪದಗಳನ್ನು ಬಳಸಿ ಮಹಿಳೆಯರಿಗೆ ಬೈದಿದ್ದು, “ಕಿರುಚಬೇಡಿ, ಕೂಗಾಡಿದರೆ ನಿಮ್ಮ ಕತ್ತು ಹಿಸುಕುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ.
ಪುರಸಭೆಯಿಂದ ರಸ್ತೆ ನಿರ್ಮಿಸಲಾಗುತ್ತಿದ್ದರೂ ಬಿಜೆಪಿ ನಾಯಕ ರಸ್ತೆ ಉದ್ಘಾಟನೆಗೆ ಏಕೆ ಹಾಜರಾಗುತ್ತಿದ್ದಾರೆ ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ. ಈ ವೇಳೆ “ಇದಕ್ಕೆ ನಾನು ಹಣ ನೀಡಿದ್ದೇನೆ; ಇದು ನಿಮ್ಮ ಅಪ್ಪನ ಹಣವಲ್ಲ. ಹೋಗಿ ಪ್ರದೀಪ್ ಸರ್ಕಾರ್ (ಸ್ಥಳೀಯ ಟಿಎಂಸಿ ಕೌನ್ಸಿಲರ್) ಅವರನ್ನು ಕೇಳಿ” ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
“ತಂದೆಯನ್ನು ಮಧ್ಯ ತರುವುದೇಕೆ? ನೀವು ಇಲ್ಲಿ ಈ ಹಿಂದೆ ಸಂಸರಾಗಿದ್ದದ್ದು” ಎಂದು ಮಹಿಳೆಯೊಬ್ಬರು ಪ್ರತ್ಯುತ್ತರ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಘೋಷ್, “ನಾನು ನಿಮ್ಮ ಹದಿನಾಲ್ಕು ತಲೆಮಾರುಗಳನ್ನು ಬೆಳೆಸುತ್ತೇನೆ” ಎಂದು ಹಣದ ದರ್ಪದಿಂದ ನುಡಿದಿದ್ದಾರೆ.
After Arjun Singh and Suvendu Adhikari now the very infamous @DilipGhoshBJP got belt treatment from women of West Bengal. Dilip literally tried to threat her but got perfect treatment in return. BJP is yet to see it’s worse times. Wait and watch! #WestBengal #BJP pic.twitter.com/V7RnHuy52Y
— Saradsree Ghosh (@TheSavvySapien) March 21, 2025
ಘೋಷ್ ಅವರ ಭದ್ರತಾ ಸಿಬ್ಬಂದಿ ಮತ್ತು ಬಿಜೆಪಿ ಕಾರ್ಯಕರ್ತರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿದ್ದಂತೆ ಮಹಿಳೆಯರು ಘೋಷ್ ಅವರ ಕಾರನ್ನು ಸುತ್ತುವರೆದರು. ಈ ನಡುವೆ ಪ್ರತಿಭಟನಾಕಾರರು ಟಿಎಂಸಿ ಬೆಂಬಲಿಗರು ಎಂದು ಘೋಷ್ ಆರೋಪಿಸಿದ್ದಾರೆ.
ಬಿಜೆಪಿ ನಾಯಕನ ಈ ವರ್ತನೆಯನ್ನು ಟಿಎಂಸಿ ಖಂಡಿಸಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಕೆಲವ ಬಿಜೆಪಿ ಕಾರ್ಯಕರ್ತರು ಘೋಷ್ ಮಹಿಳೆಯರಿಗೆ ಬೆದರಿಕೆ ನೀಡಿರುವುದನ್ನು ಹಾಡಿ ಹೊಗಳಿದ್ದಾರೆ. ಬಿಜೆಪಿ ನಾಯಕನ ವರ್ತನೆ ಖಂಡನಾರ್ಹ ಮತ್ತು ಅಧಿಕಾರ, ಹಣದ ದರ್ಪ ಸ್ಪಷ್ಟವಾಗಿ ಕಾಣುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
