ದಿ ಮೀಡಿಯಾ ಫೌಂಡೇಷನ್ ವರ್ಷದ ಅದ್ವಿತೀಯ ಮಹಿಳಾ ಪತ್ರಿಕೋದ್ಯೋಗಿಗೆ ನೀಡುವ ‘ಚಮೇಲಿ ದೇವಿ ಜೈನ್ ಪ್ರಶಸ್ತಿ’ಗೆ ಈ ಸಲ ‘ದಿ ಕಾರವಾನ್’ ಮಾಸಪತ್ರಿಕೆಗೆ ವರದಿ ಮಾಡುವ ಜತೀಂದರ್ ಕೌರ್ ತುರ್ ಅವರನ್ನು ಆರಿಸಲಾಗಿದೆ.
ಕಳೆದ ವರ್ಷವೂ ಈ ಪ್ರಶಸ್ತಿ ‘ದಿ ಕಾರವಾನ್’ ಪತ್ರಿಕೆಗೆ ಮಣಿಪುರ ಸಂಘರ್ಷವನ್ನು ವರದಿ ಮಾಡಿದ್ದ ಗ್ರೀಶ್ಮ ಕುಠಾರ್ ಅವರ ಪಾಲಾಗಿತ್ತು.
ಜಮ್ಮುವಿನ ರಜೌರಿ ಮತ್ತು ಪೂಂಛ್ ಜಿಲ್ಲೆಗಳ 26 ಗುಜ್ಜರ್ ಪುರುಷರನ್ನು ಭಾರತೀಯ ಸೇನೆಯು 2023ರ ಡಿಸೆಂಬರ್ನಲ್ಲಿ ವಶಕ್ಕೆ ಪಡೆದು ತೀವ್ರ ಚಿತ್ರಹಿಂಸೆಗೆ ಗುರಿಪಡಿಸಿದ್ದ ಕುರಿತು ಜತೀಂದರ್ ದಣಿವರಿಯದೆ ವರದಿ ಮಾಡಿದ್ದರು. ‘ದಿ ಕಾರವಾನ್’ನ 2024ರ ಫೆಬ್ರವರಿ ಸಂಚಿಕೆಗೆ ಮೊದಲ ಸಲ ಈ ವಿಷಯ ಕುರಿತು ಜತೀಂದರ್ ವರದಿ ಬರೆದಿದ್ದರು. ಈ ಬರೆಹವನ್ನು ವೆಬ್ಸೈಟ್ನಿಂದ ತೆಗೆದು ಹಾಕುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ದಿ ಕಾರವಾನ್ಗೆ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಕಾರವಾನ್ ತಕ್ಷಣವೇ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು
ಜತೀಂದರ್ ವರದಿಯಲ್ಲಿ ಏನು ತಪ್ಪುಗಳಿದ್ದವು ಎಂದು ವಿಚಾರಣೆಯಲ್ಲಿ ಒಮ್ಮೆಯೂ ನಿರ್ದಿಷ್ಟವಾಗಿ ಹೇಳಲಿಲ್ಲ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ. ಒಂದು ವರ್ಷದ ನಂತರ 2025ರ ಫೆಬ್ರವರಿಯಲ್ಲಿ ಗುಜ್ಜರ್ ಪುರುಷರ ಬಂಧನ-ಚಿತ್ರಹಿಂಸೆ ಕುರಿತು ಸೇನೆಯ ತನಿಖೆಯ ಕುರಿತು ಜತೀಂದರ್ ವರದಿ ಮಾಡಿದರು. ದಾಖಲೆ ದಸ್ತಾವೇಜುಗಳ ಪುರಾವೆಗಳು ಮತ್ತು ಯೋಧರ ಸಾಕ್ಷ್ಯ ಹೇಳಿಕೆಗಳು ಮತ್ತು ಜತೀಂದರ್ ಬಗೆದು ತೆಗೆದ ದಾಖಲೆ-ದಸ್ತಾವೇಜು ಪುರಾವೆಗಳು ಈಕೆ 2024ರಲ್ಲಿ ಇದೇ ವಿಷಯ ಕುರಿತು ಬರೆದಿದ್ದ ವರದಿಯನ್ನು ಪುಷ್ಟೀಕರಿಸಿದವು. ಚಿತ್ರಹಿಂಸೆ ಮತ್ತು ಹತ್ಯೆಗಳ ಮೇಲೆ ಬೆಳಕು ಚೆಲ್ಲಿದವು.
ಈ ಚಿತ್ರಹಿಂಸೆಗೆ ಬಲಿಯಾದವರ ಕುಟುಂಬಗಳನ್ನೂ ಜತೀಂದರ್ ಮಾತನಾಡಿಸಿದರು. ನ್ಯಾಯ ಸಿಗುವ ಎಲ್ಲ ಆಸೆಯನ್ನೂ ತೊರೆದಿದ್ದವು ಈ ಕುಟುಂಬಗಳು. ಯಾವ್ಯಾವ ವ್ಯಕ್ತಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸಲಾಯಿತು, ಯಾವ್ಯಾವ ಅಧಿಕಾರಿಗಳ ಆಣತಿಯ ಮೇರೆಗೆ ಯಾರ್ಯಾರು ಚಿತ್ರಹಿಂಸೆ ಮಾಡಿದರು ಎಂಬ ಸೂಕ್ಷ್ಮ ವಿವರಗಳು ಸೇನೆಯ ಉನ್ನತ ಅಧಿಕಾರಿಗಳಿಗೆ ತಿಳಿದಿತ್ತು. ವಶಕ್ಕೆ ತೆಗೆದುಕೊಂಡು ಚಿತ್ರಹಿಂಸೆಗೆ ಗುರಿಪಡಿಸಲಾದ ಬಹುತೇಕರು ಭಯೋತ್ಪಾದಕರ ಜೊತೆ ಯಾವುದೇ ಸಂಪರ್ಕ ಹೊಂದಿರದ ನಾಗರಿಕರಾಗಿದ್ದರು.
ಕಮಲಾ ಮಂಕೇಕರ್ ಪ್ರಶಸ್ತಿ (ಜೆಂಡರ್) ಮತ್ತು ವಿಶ್ವನಾಥ್-ಡೆಲ್ಲಿ ಪ್ರೆಸ್ ಪ್ರಶಸ್ತಿ (ನಿರ್ಭೀತ ಪತ್ರಿಕೋದ್ಯಮ) ಈ ವರ್ಷದಿಂದ ಆರಂಭಿಸಿರುವ ಹೊಸ ಪ್ರಶಸ್ತಿಗಳು. ‘ಬೆಹನ್ ಬಾಕ್ಸ್’ನ ಪ್ರಿಯಾಂಕ ತುಪೆ ಮತ್ತು ಸ್ಕ್ರೋಲ್ ನ ರೋಕಿಬಝ್ ಝಮನ್ ಅವರಿಗೆ ಈ ಪ್ರಶಸ್ತಿಗಳು ಸಂದಿವೆ.
And the winner of the Chameli Devi Jain Award for Journalism 2024 is Jatinder Kaur Tur, The Caravan! Congratulations Jatinder!
— PKR | প্রশান্ত | پرشانتو (@prasanto) March 21, 2025
Congratulations also to Divya Arya of the BBC, for the special mention.
This was a difficult one, with dozens of outstanding entries. Congrats to all… pic.twitter.com/Ry0UBTwUKZ