ಹಾಸನ ನಗರದ ಹಲವು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿಗೆ ತತ್ತರಿಸಿದ್ದ ಸ್ಥಳೀಯರು ತುಸು ನಿಟ್ಟುಸಿರು ಬಿಡುವಂತಾಗಿದೆ. ಜತೆಗೆ ಇನ್ನೂ ನಾಲ್ಕೈದು ದಿನ ಮಳೆ ಬರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಮಾನ ಇಲಾಖೆ ವರದಿಯಂತೆ ಶನಿವಾರ ಮದ್ಯಾಹ್ನದ ವೇಳೆ ಗುಡುಗು ಸಹಿತ ಮಳೆಯಾಗಿದೆ. ಈಗಾಗಲೇ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಶನಿವಾರ ಪರೀಕ್ಷೆ ಇರದ ಕಾರಣ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆಯಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಗಂಗಾವತಿ | ಹಂಪಿ ಪ್ರಕರಣದ ಬೆನ್ನಲ್ಲೇ ಮತ್ತೊಂದು ಘಟನೆ; ಮಹಿಳೆಯರ ಮುಖದ ಮೇಲೆ ಸಿಗರೇಟು ಹೊಗೆ ಬಿಟ್ಟ ದುಷ್ಟರು
ಬಿಸಿಲಿನ ಬೇಗೆಯಲ್ಲಿದ್ದ ಜನರು ಮಳೆ ಬಂದಿರುವುದನ್ನು ಕಂಡು ಸಂತಸಗೊಂಡಿದ್ದಾರೆ. ಶನಿವಾರ ಮದ್ಯಾಹ್ನದ ನಂತರ ಬಿಸಿಲು ಕಡಿಮೆಯಾಗಿ ಆಕಾಶದಲ್ಲಿ ಮೋಡ ಕವಿದಿತ್ತು. 10 ನಿಮಷ ಸುರಿದ ಮಳೆಗೆ ರಸ್ತೆ ಮೇಲೆ ಮತ್ತು ಸುತ್ತ ಅಲ್ಲಲ್ಲಿ ಮಳೆಯ ನೀರು ಸಂಗ್ರಹವಾಗಿದ್ದು, ಕೊಡೆಯ ಆಶ್ರಯದಲ್ಲಿ ಅನೇಕರು ಸಾಗುತ್ತಿರುವುದು ಕಂಡುಬಂದಿದೆ.