- 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟೆ ವಿತರಣೆ
- ಮೊಟ್ಟೆ ವಿತರಣೆ ಮಾಡಲ್ಲ ಎನ್ನುವುದು ಅಪಪ್ರಚಾರ
ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ನೀಡಲಾಗುತ್ತಿದ್ದ ಮೊಟ್ಟೆ ವಿತರಣೆಯನ್ನು ಸರ್ಕಾರ ನಿಲ್ಲಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, 9 ಮತ್ತು 10ನೇ ತರಗತಿ ಶಾಲಾ ಮಕ್ಕಳಿಗೂ ಮೊಟ್ಟೆ ವಿತರಣೆಗೆ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ವಿತರಿಸಲಾಗುವ ಮೊಟ್ಟೆಗಳಿಗೂ ರಾಜ್ಯ ಕಾಂಗ್ರೆಸ್ ಸರ್ಕಾರ ತಡೆ ನೀಡಲಾಗಿದೆ ಎನ್ನುವುದು ಅಪಪ್ರಚಾರ, ಶಾಲಾ ಮಕ್ಕಳಿಗೆ ಮೊಟ್ಟ ವಿತರಣೆ ನಾವು ತಡೆ ಹಿಡಿದಿಲ್ಲ. ವರ್ಷಕ್ಕೆ 42 ಬಾರಿ ಮೊಟ್ಟೆ ನೀಡಬೇಕು ಎಂದು ಹಿಂದಿನ ಸರ್ಕಾರ ನಿರ್ಧಾರ ಮಾಡಿತ್ತು. ನಾವು ಮೊಟ್ಟೆ ವಿತರಣೆ ತಡೆ ಹಿಡಿದಿಲ್ಲ. ವರ್ಷಕ್ಕೆ 42 ಮೊಟ್ಟೆಗಳನ್ನು ನೀಡುವುದನ್ನು ಹೆಚ್ಚಳ ಮಾಡುವುದಕ್ಕೆ ನಿರ್ಧಾರ ಮಾಡ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ?: ನೈಸರ್ಗಿಕ ವಿಕೋಪ ನಿರ್ವಹಣೆ; ಸಂಪುಟ ಉಪಸಮಿತಿ ರಚಿಸಿದ ಸರ್ಕಾರ
ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಿಸುವ ನಿಟ್ಟಿನಲ್ಲಿ ನೀಡಬೇಕಿರುವಂತಹ ಪೋಷಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿದೆ. ಆ ಪ್ರಮಾಣದಲ್ಲಿ ಯಾವುದೇ ಕಡಿತವನ್ನು ಸರ್ಕಾರ ಮಾಡಿಲ್ಲ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.