ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಪುಂಡರಿಬ್ಬರು ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿರುವ ಘಟನೆ, ಹಾಸನ ನಗರದ ಬಿಟ್ಟಗೌಡನಹಳ್ಳಿಯ ಎಸ್‌ಎಲ್‌ಎನ್ ಪೆಟ್ರೋಲ್ ಬಂಕ್‌ನಲ್ಲಿ ಶನಿವಾರ ನಡೆದಿದೆ.
ಸ್ಕೂಟಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಇಬ್ಬರು ವ್ಯಕ್ತಿಗಳು ಪೆಟ್ರೋಲ್ ಬಂಕ್ ಗೆ ಬರುತ್ತಾರೆ, ಪೆಟ್ರೋಲ್ ಹಾಕಿದ ಬಳಿಕ ಪೆಟ್ರೋಲ್ ಬಂಕ್ ಸಿಬ್ಬಂದಿ ಹಣ ಕೇಳಿದಾಗ, ಇಬ್ಬರು ವ್ಯಕ್ತಿಗಳು ಸ್ಕೂಟರ್ ಬಳಿ ಇರಿಸಿದ್ದ ಚೀಲದಲ್ಲಿ ಡ್ಯಾಗರ್( ಮಾರಕಾಸ್ತ್ರ) ತೆಗೆದು ತೋರಿಸಿ ಬೆದರಿಕೆ ಹಾಕಿ ಆ ಜಾಗದಿಂದ ತೆರಳಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l 22.3 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳು
ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
