“ಒನಕೆ ಓಬವ್ವಳ ಕುರಿತು ಪ್ರಾಥಮಿಕ ಶಾಲೆಯಲ್ಲಿ ಮಾತ್ರವಲ್ಲ, ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ಪಠ್ಯ ಆಗಬೇಕು” ಎಂದು ಹಿರಿಯ ಸಾಹಿತಿ ಸಿ. ಎಸ್. ಮರಳಿಹಳ್ಳಿ ಅಭಿಪ್ರಾಯ ಪಟ್ಟರು.
ಹಾವೇರಿ ಪಟ್ಟಣದ ಗಾಂಧಿ ಭವನದಲ್ಲಿ ರಾಜ್ಯ ಒನಕೆ ಓಬವ್ವ ಟ್ರಸ್ಟ್ ಬೆಂಗಳೂರು ಸಹಯೋಗದಲ್ಲಿ ಒನಕೆ ಓಬವ್ವ ಕವಿಗೋಷ್ಠಿ ಮತ್ತು ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
“ಒನಕೆ ಓಬವ್ವ ನಿಷ್ಠೆ, ಪ್ರಾಮಾಣಿಕತೆಗೆ ಹೆಸರಗಿದ್ದಳು. ನಿಸ್ವಾರ್ಥ ಸೇವೆ ಸಲ್ಲಿಸಿ, ಹೋರಾಟ ಮಾಡಿ ಶತ್ರುಗಳನ್ನು ಸದೆಬಡೆದು ಜಯಶಾಲಿಯಾಗಿ ಚಿತ್ರದುರ್ಗದ ಇತಿಹಾಸವನ್ನು ಅಜರಾಮರವಾಗಿಸಿದ ವೀರ ಒನಕೆ ಓಬವ್ವ” ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ ಹಿರೇಮಠ ಅವರು ಒನಕೆ ಓಬವ್ವ ಜೀವನ ಚರಿತ್ರೆಯ ಧ್ವನಿ ಸುರಳಿ ಬಿಡುಗಡೆಗೊಳಿಸಿ ಮಾತನಾಡಿ, “ಒನಕೆ ಓಬವ್ವ ಚರಿತ್ರೆಯ ಕುರಿತು ಸಂಶೋಧನ ಸಂಶೋಧನಗಳು ಆಗಬೇಕು. ಸಂಶೋಧನ ವಿಷಯಾವಾಗಿ ತೆಗೆದುಕೊಳ್ಳುವಂತೆ ಸಂಶೋಧಕರಿಗೆ ಪ್ರೆರೇಪಿಸಬೇಕಿದೆ” ಎಂದು ಹೇಳಿದರು.
ಜಿಲ್ಲೆಯ ಮುವತ್ತೆಂಟು ಹಿರಿ-ಕಿರಿಯ ಕವಿಗಳು ಸ್ವ ರಚಿತ ಕವನಗಳನ್ನು ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಭಗತ್ ಸಿಂಗ್ ಹುತಾತ್ಮ ದಿನದಂದು ಸರ್ಕಾರಿ ಶಾಲೆಗಳನ್ನು ಉಳಿಸುವ ಸಂಕಲ್ಪ
ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ನೆಹರು ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಡಿ ಮದ್ಲೇರ, ನಿವೃತ್ತ ಅಬಕಾರಿ ಅಧಿಕಾರಿ ಬಿ. ಸಾವಕ್ಕನವರ, ನಿವೃತ್ತ ಎಸ್. ಬಿ. ಐ ಮ್ಯಾನೇಜರ್ ಮಂಜಪ್ಪ ಮಿನಗಲವರ, ನಿವೃತ್ತ ಸಹಾಯಕ ನಿರ್ದೇಶಕರು ಎನ್. ಬಿ ಕಾಳೆ ಇದ್ದರು. ಗೌರವ ಉಪಸ್ಥಿತಿ ಸಾಹಿತಿ, ಧ್ವನಿ ಸುರಳಿ ಕರ್ತೃ ಅಶೋಕ ಕೊಂಡ್ಲಿ, ಹಿರಿಯ ಲೇಖಕರು ಸತೀಶ ಕುಲಕರ್ಣಿ, ಪೃಥ್ವಿರಾಜ ಬೆಟಗೇರಿ ಹಾಗೂ ಅನೇಕರು ಭಾಗವಹಿಸದ್ದರು.