ಬೀದರ್ ನಗರದಲ್ಲಿ ಭಾನುವಾರ ಜೋರು ಮಳೆ ಸುರಿಯಿತು.
ಸಂಜೆ 4 ಗಂಟೆಗೆ ಶುರುವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಗುಡುಗು, ಮಿಂಚು ಸಹಿತ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಖರವಾದ ಬಿಸಿಲಿತ್ತು. ಸಂಜೆ ದಟ್ಟ ಕಾರ್ಮೋಡ ಕವಿದು ಗುಡುಗು, ಗಾಳಿ ಸಹಿತ ಬಿರುಸಿನ ಮಳೆ ಆರಂಭಗೊಂಡಿತು.
ಕಾದ ಹೆಂಚಿನಂತಾಗಿದ್ದ ಭೂಮಿಗೆ ಭರ್ಜರಿ ಮಳೆಯಿಂದ ಜನರಿಗೆ ತುಸು ತಂಪೆರೆಯಿತು.
ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ 39-40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದಾರೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ.