ರಾಜ್ಯದ ರಾಯಚೂರಿನ ದೇವಾಲಯಕ್ಕೆ ಒಟ್ಟು 3,48,69,621 ರೂ. ನಗದು, 32 ಗ್ರಾಂ ಚಿನ್ನ ಮತ್ತು 1.24 ಕೆಜಿ ಬೆಳ್ಳಿಯನ್ನು ದಾನ ಮಾಡಲಾಗಿದೆ. ರಾಘವೇಂದ್ರ ಸ್ವಾಮಿ ಮಠದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಘವೇಂದ್ರ ಸ್ವಾಮಿ ಮಠದಲ್ಲಿ ನೂರಕ್ಕೂ ಹೆಚ್ಚು ಅರ್ಚಕರು ದೇಣಿಗೆಗಳನ್ನು ಎಣಿಸುತ್ತಿರುವುದನ್ನು ತೋರಿಸುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ಕಟ್ಟುಪಾಡು ದಾಟಿ ಹೃದಯ ಸ್ಪರ್ಶಿಸುವ ಬ್ರಹ್ಮಚರ್ಯದ ಗೋಳಿನ ಕತೆ ‘ರಾಘವೇಂದ್ರ ಸ್ಟೋರ್ಸ್’
16ನೇ ಶತಮಾನದ ಸಂತ ರಾಘವೇಂದ್ರ ಸ್ವಾಮಿಗಳ ಜನ್ಮ ದಿನಾಚರಣೆ ಆಚರಣೆ ವೇಳೆ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, 30 ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ.
ಇನ್ನು ಕಳೆದ ವರ್ಷ, ಯುನೈಟೆಡ್ ಕಿಂಗ್‌ಡಮ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ ಬೆಂಗಳೂರಿನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದರು.
Rs 3,48,69,621 Cash, 1 Kg Silver, 32 Grams Gold Donated At Karnataka Temple pic.twitter.com/qXuejB8cmZ
— NDTV (@ndtv) March 23, 2025
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ತಮ್ಮ ಮಗಳು ಮತ್ತು ಅಳಿಯನೊಂದಿಗೆ ಮಠಕ್ಕೆ ಬಂದಿದ್ದರು. ಹಾಗೆಯೇ ಹಲವು ಗಣ್ಯರು ಮಠಕ್ಕೆ ಭೇಟಿ ನೀಡಿದ್ದರು.
ಸದ್ಯ ನೆಟ್ಟಿಗರು ಒಂದು ತಿಂಗಳಲ್ಲೇ ಇಷ್ಟೊಂದು ಹಣ ದೇಣಿಗೆಯಾಗಿ ಸಂಗ್ರಹವಾಗಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
