ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ತೀವ್ರ ಜನರಿಗೆ ಹಾಗೂ ಕೃಷಿಗೆ ತೊಂದರೆ ಕೊಡುತ್ತದೆ ಕೊಡುತ್ತಿದ್ದ, ಮಕ್ನಾ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಭಾನುವಾರ ಯಶಸ್ವಿಯಾಗಿದೆ.
ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಜಾನುವಾರು, ಮನೆಗಳ ಮೇಲೆ ದಾಳಿ ಮಾಡುತ್ತಿದ್ದ, ಕಾಡಾನೆಗೆ ಭಾನುವಾರ ಬೆಳಿಗ್ಗೆ ಅರವಳಿಕೆ ನೀಡಲು ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ವೈದ್ಯರಾದ ಡಾ. ರಮೇಶ್ ಹಾಗೂ ಅರಣ್ಯ ಅಧಿಕಾರಿಗಳ ತಂಡ ಎರಡು ಗಂಟೆಗೂ ಹೆಚ್ಚು ಕಾಲ ಶ್ರಮಪಟ್ಟು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಪುಂಡರು
ಹಾಗೆಯೇ, ಕಾರ್ಯಾಚರಣೆಯಲ್ಲಿ ಸಾಕಾನೆ ಕ್ಯಾಪ್ಟನ್ ಪ್ರಶಾಂತ್ ನಾಯಕತ್ವದಲ್ಲಿ. ಇತರೆ ಸಾಕಾನೆಗಳಾದ ಏಕಲವ್ಯ, ಧನಂಜಯ, ಹರ್ಷ, ಖಂಜನ್, ಭೀಮ ಮತ್ತು ಮಹೇಂದ್ರ ಅವರ ಸಹಾಯದಿಂದ ಆನೆಯನ್ನು ಸೆರೆಹಿಡಿಯಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
