“ದೇಶದ ಸ್ವತಂತ್ರ್ಯಕ್ಕಾಗಿ ನಗುತ್ತಲೇ ಪ್ರಾಣಾರ್ಪಣೆಗೈದು ಹುತಾತ್ಮರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಕನಸುಗಳನ್ನು ನನಸು ಮಾಡಲು ಯುವಜನತೆ ಮುಂದಾಗಬೇಕು” ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಎಂದು ಕರೆ ನೀಡಿದರು.
ಹಾವೇರಿ ಪಟ್ಟಣದ ಬಿಸಿಎಮ್ ವಸತಿ ನಿಲಯದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೆಷನ್ (ಡಿವೈಎಫ್ಐ) ಸಂಯುಕ್ತಾಶ್ರಯದಲ್ಲಿ ಕಾಮ್ರೇಡ್ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನದ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಭಗತ್ ಸಿಂಗ್ ಒಬ್ಬ ಉತ್ತಮ ಅಧ್ಯಯನ ಶೀಲರಾಗಿದ್ದರು. ಎಷ್ಟರ ಮಟ್ಟಿಗೆ ಎಂದರೆ ‘ನೇಣು ಕಂಬಕ್ಕೆ ಏರುವ ಕೊನೆ ಕ್ಷಣದವರೆಗೂ ಅಧ್ಯಯನ ಮಾಡಿದರು’. ಕ್ರಾಂತಿ ಎಂದರೆ ಬಂದೂಕು ಬಾಬ್ ಗಳಿಂದ ಹತ್ಯೆ ಮಾಡುವದಲ್ಲ’ ಎಂದು ನಂಬಿದ್ದರು. ಭಗತ್ ಅವರು ತಾಯಿಯೊಂದಿಗೆ ಸಂಭಾಷಣೆ ಮಾಡುವ ಸಂದರ್ಭದಲ್ಲಿ ಬಿಳಿಯ ಸಾಹೇಬರ ಬದಲಾಗಿ ಕರಿಯ ಸಾಹೇಬರು ಬರಬಹುದು ಭಗತ್ ಸಿಂಗ್ ಅವರ ಆತಂಕ ಇಂದು ಪ್ರಸ್ತುತವಾಗಿದೆ” ಎಂದರು.
ಡಿವೈಎಫ್ಐ ಮುಖಂಡರಾದ ನಾರಾಯಣ ಕಾಳೆ ಮಾತನಾಡಿ, “ಭಗತ್ ಸಿಂಗ್ ಅವರನ್ನು ಸರಿಯಾಗಿ ಅಧ್ಯಯನ ಮಾಡಿ ಆದರ್ಶವಾಗಿ ತೆಗೆದುಕೊಂಡು ವಿದ್ಯಾರ್ಥಿ ಯುವಜನರು ಶಿಕ್ಷಣಕ್ಕಾಗಿ, ಉದ್ಯೋಗಕ್ಕಾಗಿ, ದೇಶದ ಸೌಹಾರ್ದ ಐಕ್ಯತೆಗಾಗಿ ಹೋರಾಡಬೇಕು” ಎಂದು ಹೇಳಿದರು.
“ಭಗತ್ ಸಿಂಗ್ ಸಂಗಡಿಗರೊಂದಿಗೆ ಹಾವೇರಿ ನೆಲದ ಸ್ವತಂತ್ರ್ಯ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮೈಲಾರ ಮಹಾದೇವಪ್ಪ, ತಿರುಕಪ್ಪ ಮಡಿವಾಳರ, ಮೆಣಸಿನಾಳ ತಿಮ್ಮನಗೌಡರು ಇವರನ್ನು ಸ್ಮರಿಸಬೇಕು. ಉದ್ಯೋಗ ಜೀವನಕ್ಕಾಗಿ ಎಷ್ಟು ಮುಖ್ಯ ಅಷ್ಟೇ ದೇಶಕ್ಕಾಗಿ ಕೂಡ ದುಡಿಯಬೇಕು. ನಿರಂತರ ಅಭ್ಯಾಸ ದಿಂದ ಸಾಧನೆ ಮಾಡಿ ಆಗ ಮಾತ್ರ ಹುತಾತ್ಮರ ತ್ಯಾಗ ಸಾರ್ಥಕ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ವೇದಿಕೆ ಜಿಲ್ಲಾ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ, ನಿಲಯ ಪಾಲಕರಾದ ಪರಮೇಶ್ವರ ತಿಪ್ಪಕೊಂಡರ, ಅಧ್ಯಕ್ಷತೆ ವಹಿಸಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ತಿಪಟೂರು | ಸೊಸೈಟಿ ಚುನಾವಣೆ; ಗೆದ್ದವರ ವಿರುದ್ಧ ಸೋತವರ ಪಿತೂರಿ
ಕಾರ್ಯಕ್ರಮದ ವೇದಿಕೆಯಲ್ಲಿ ಸುನೀಲ್ ಕುಮಾರ್ ಎಲ್ ಇದ್ದರು. ನವೀನ ಮಲಗಣ್ಣನವರ, ವೀರನಗೌಡ ಪಾಟೀಲ, ಸಂಜೀವ ಬನ್ನಿಮಟ್ಟಿ, ರಾಕೇಶ ಗುರಣ್ಣನವರ, ಶಿವರಾಜ ಬೇಲಿ, ಅಪ್ಪು ಆರ್, ಅನ್ವಿಕಾ ಆರ್ ಬಿ, ಭುವನ್, ರತನ್ ಪಿ.ಟಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.