ನೂತನ ಹುಲಸೂರ ತಾಲ್ಲೂಕಿನ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ (ಮಾ.24) ಹುಲಸೂರನಲ್ಲಿ ರಸ್ತೆ ತಡೆ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಯಲಿದೆ.
‘ಹುಲಸೂರ ಪಟ್ಟಣದ ಭಾಲ್ಕಿ-ಹುಲಸೂರ-ಬಸವಕಲ್ಯಾಣ ಮುಖ್ಯ ರಸ್ತೆ ತಡೆ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಹುಲಸೂರ ತಾಲ್ಲೂಕಾ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ರಾಜೋಳೆ ತಿಳಿಸಿದ್ದಾರೆ.
ನಾಳೆ ನಡೆಯಲಿರುವ ಹುಲಸೂರ ಬಂದ್‌ಗೆ ಪಟ್ಟಣದ ವ್ಯಾಪಾರಿಗಳು, ವಿವಿಧ ಸಂಘಟನೆಗಳು ಬೆಂಬಲಿಸಿ ನ್ಯಾಯಯುತ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.
ಬೇಡಿಕೆಗಳು : ಮಿನಿ ವಿಧಾನಸೌಧ, ತಾಲ್ಲೂಕು ನ್ಯಾಯಾಲಯ. ಗ್ರಾ.ಪಂ ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯಾಗಿಸಬೇಕು. ಎಂ.ಬಿ.ಪ್ರಕಾಶ ಆಯೋಗದ ಶಿಫಾರಸಿನಂತೆ 62 ಹಳ್ಳಿಗಳ 20 ಗ್ರಾ.ಪಂ ಹುಲಸೂರು ತಾಲ್ಲೂಕಿಗೆ ಸೇರಿುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದ್ದಾರೆ.
ನಾಳೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹೋರಾಟ ನಡೆಸಲಾಗುತ್ತದೆ ಮಾಹಿತಿ ನೀಡಿದ್ದಾರೆ.