(ಮುಂದುವರಿದ ಭಾಗ..) ಆರ್ಥರ್ ಕೊನನ್ನ್ ಡಾಯ್ಲ ಅವರ ಮೊದಲ ಕಾದಂಬರಿ ‘ಎ ಸ್ಟಡೀ ಇನ್ ಸ್ಕಾರಲೆಟ್’ ಶುರು ಆಗುವುದು ಬ್ರಿಟನ್ ಸೈನ್ಯದ ಮಾಜಿ ಸೈನ್ಯಾಧಿಕಾರಿ ಡಾ. ಜಾನ್ ವಾಟ್ಸನ್‌ನ ಪರಿಚಯದ ಮೂಲಕ. ಅವಿಭಜಿತ ಭಾರತದಲ್ಲಿ ಕೆಲಸ ಮಾಡಿದ್ದ ಈತ ಯುದ್ಧಭೂಮಿಯಲ್ಲಿ ಗಾಯಗೊಂಡಿರುತ್ತಾನೆ. ಸರಕಾರದ ಅಂಗವೈಕಲ್ಯ ನಿವೃತ್ತಿ ವೇತನ ಪಡೆದು ತನ್ನವರಾರೂ ಇಲ್ಲದ ಲಂಡನ್‌ನಲ್ಲಿ ದಿನದೂಡಬೇಕಾದ ಅನಿವಾರ್ಯತೆ ಅವನಿಗೆ ಒದಗಿ ಬರುತ್ತದೆ. ಇದು ಅವನು ಶರ್ಲಾಕ್ ಹೋಮ್ಸ್‌ನನ್ನು ಭೇಟಿ ಆಗುವ ಮುಂಚೆ. ಹೋಟೆಲ್‌ನ ಕೋಣೆಯೊಂದರಲ್ಲಿ, ತನ್ನ ಅದೃಷ್ಟವನ್ನು ಹಳಿಯುತ್ತಾ…

ಹೃಷಿಕೇಶ ಬಹದ್ದೂರ ದೇಸಾಯಿ
ಪತ್ರಕರ್ತರು