ಶಿವಮೊಗ್ಗ ನಗರದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ವತಿಯಿಂದ ನಿನ್ನೆ ಇಫ್ತಾರ್ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಶಾಹಿದ್ ಅಲಿ ರವರು ಪ್ರಸ್ತುತ ರಾಜಕೀಯ ಮತ್ತು ವಕ್ಫ್ ತಿದ್ದುಪಡಿ ಕಾಯ್ದೆ 2024ರ ಬಗ್ಗೆ ಮಾತನಾಡುತ್ತಾ.. ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ ಕಾಯ್ದೆಯಾಗಿದೆ. ಇದನ್ನು ವಿರೋಧಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ. ಕೂಡಲೇ ಕಾಯ್ದೆ ಹಿಂಪಡೆಯದಿದ್ದರೆ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ಜಿಲ್ಲಾ ಅಧ್ಯಕ್ಷ ಜೀಲಾನ್ ರಜಾ ಖಾನ್ ಮಾತನಾಡಿ, “ಈ ಹೋರಾಟವನ್ನು ಜಿಲ್ಲಾ ಮಟ್ಟದಲ್ಲಿ ಮಾಡಿ ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಬೇಕಾದ ಅಗತ್ಯತೆ ಇದೆ” ಎಂದು ಮಾತನಾಡಿದರು” ಎಂದರು.
ಇದನ್ನೂ ಓದಿ: ಶಿವಮೊಗ್ಗ | ಹೊಸನಗರ ಮನೆಗಳ್ಳನ ಬಂಧನ

ಕಾರ್ಯಕ್ರಮದಲ್ಲಿ ಮಜ್ಹರ್ ಅಹ್ಮದ್ ಬಾದಲ್, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಲೀಂ ಖಾನ್, ಸುನ್ನೀ ಟಿಪ್ಪು ಮಸ್ಜಿದ್ ಅಧ್ಯಕ್ಷ ಮುನೀರ್ ಸಾಬ್, ಕಡೇಕಲ್ ಜಾಮಿಯಾ ಮಸ್ಜಿದ್ ಅಧ್ಯಕ್ಷ ಅತಾವುರ್ ರೆಹಮಾನ್, ಜಿಲ್ಲಾ ಸಮಿತಿ ಸದಸ್ಯ ಕಲೀಂ ಉಲ್ಲಾ, ನಗರ ಕಾರ್ಯದರ್ಶಿ ಸಜೀಲ್ ಬೇಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್, ಮಸ್ಜಿದ್ ಮುಖಂಡರು, ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.