ಅಪ್ರಾಪ್ತ ಬಾಲಕರು ವಾಹನ ಚಾಲನೆ ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಶಿವಮೊಗ್ಗ ಸಂಚಾರಿ ಪೊಲೀಸರು ವಾಹನ ಮಾಲಿಕರಿಗೆ ತಲಾ ₹25000 ದಂಡ ವಿಧಿಸಿದ್ದಾರೆ.
ಮಾ.15ರಂದು ಸಿಪಿಐ ಸಂತೋಷಕುಮಾರ್ ಡಿ ಕೆ ಸಿಬ್ಬಂದಿರವರೊಂದಿಗೆ ಮಹಾನಗರ ಪಾಲಿಕೆಯ ಹತ್ತಿರ ಕಸ್ತೂರ ಬಾ ಕಾಲೇಜು ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಹ್ಯುಂಡಯ್ ಕಾರು ಚಾಲಕನು ಅಪ್ರಾಪ್ತ ವಯಸ್ಸಿನವನು ಎಂದು ತಿಳಿದು ಬಂದಿದೆ. ಸದರಿ ಬಾಲಕನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ಕಾರನ್ನು ನೀಡಿದ್ದರ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೊಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ಕಾರು ಮಾಲಿಕ ಹುಣಸೋಡು ಗ್ರಾಮದ ನಿವಾಸಿಗೆ ₹25000ಗಳ ದಂಡ ವಿಧಿಸಿದೆ.
ಇದನ್ನೂ ಓದಿ: ಶಿವಮೊಗ್ಗ | ಹೊಸನಗರ ಮನೆಗಳ್ಳನ ಬಂಧನ
ಮಾ.12ರಂದು ಪಿಎಸ್‌ಐ ತಿರುಮಲೇಶ್.ಜಿ ರವರು ಸಿಬ್ಬಂದಿರವರೊಂದಿಗೆ ಮಿಳಘಟ್ಟ ಕ್ರಾಸ್ ನಲ್ಲಿ ವಾಹನ ತಪಾಸಣೆ ಮಾಡುವ ಸಮಯದಲ್ಲಿ ಬಂದ ಮೊಪೆಡ್ ಗಾಡಿಯನ್ನು ಅಪ್ರಾಪ್ತ ವಯಸ್ಸಿನವನು ಚಲಾಯಿಸುತ್ತಿದ್ದದ್ದು ಗಮನಕ್ಕೆ ಬಂದಿದೆ. ವೆಂಕಟೇಶನಗರದ ನಿವಾಸಿಗೆ ಅಷ್ಟೇ ಮೊತ್ತದ ದಂಡ ವಿಧಿಸಿ ಆದೇಶಿಸಿದೆ.