“ಉದಾತ್ತ ಕಾರಣಕ್ಕಾಗಿ ಮಾಡುವ ತ್ಯಾಗ ಎಂದಿಗೂ ವ್ಯರ್ಥವಾಗದು. ಅಂತಹ ಒಂದು ತ್ಯಾಗವನ್ನು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ್ದಾರೆ. ಭಗತ್ ಸಿಂಗ್ ಮೊದಲು ಕ್ರಾಂತಿಕಾರಿಯಾಗಿ ಯೋಚಿಸಿದ್ದು, ಅವರು ಬೆಳೆಯುತ್ತಾ, ಹೆಚ್ಚಿನ ಸಾಹಿತ್ಯ ಓದುತ್ತಾ, ಜಗತ್ತಿನ ಸಮಾಜವಾದಿ ಚಳುವಳಿವನ್ನು ಅರ್ಥೈಸಿಕೊಂಡು ಅದರಂತೆ ಭಾರತದಲ್ಲೂ ಸಮಾಜವಾದಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಪಣ ತೊಟ್ಟರು” ಎಂದು ಎಸ್ ಎಫ್ ಐ ರಾಜ್ಯ ಮುಖಂಡರು ಗಣೇಶ ರಾಠೋಡ್ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಿಎಸ್ಎಸ್ ಪ್ರಥಮ ದರ್ಜೆ ಕಾಲೇಜು ಗಜೇಂದ್ರಗಡದ ಐ ಕ್ಯೂ ಎಸ್ ಐ ಮತ್ತು ಭಾರತ ವಿದ್ಯಾರ್ಥಿ ಫೆಡರೇಶನ್ ನೇತೃತ್ವದಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ ಅವರ ಹುತಾತ್ಮ ದಿನದಂದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
“ಭಗತ್ ಸಿಂಗ್ ಅವರ ಮೇಲೆ ಜಲಿಯನ್ ವಾಲಾಬಾಗ್ ಘಟನೆ ತುಂಬಾ ಪ್ರಭಾವ ಬೀರಿತ್ತು. ಲಾಲ್ ಲಜಪತ ರಾಯ್ ಅವರನ್ನು ಬ್ರಿಟಿಷ್ ಪೋಲಿಸ್ ಅಧಿಕಾರಿ ಹಲ್ಲೆ ಮಾಡಿ ಸಾಯಿಸಿದ್ದು, ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಅವರು ಸಾಂಡರ್ಸನನ್ನು ಕೊಲ್ಲಲು ಹೋಗಿ ಬೇರೆ ಅಧಿಕಾರಗೆ ಗುಂಡು ಹಾರಿಸಿದ್ದು, ಮತ್ತು ದೆಹಲಿಯ ಅಂದಿನ ಪ್ರದಾನ ಅಸೆಂಬ್ಲಿ ಒಳಗೆ ಬಾಂಬೆ ಹಾಕಿದ್ದು, ಈ ಎರಡು ಘಟನೆಯಿಂದ ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ಜೈಲಿಗೆ ಹಾಕಿ ಗಲ್ಲು ಶಿಕ್ಷೆ ವಿಧಿಸಲಾಯಿತು. ಇದರ ವಿರುದ್ಧ ದೇಶವ್ಯಾಪಿ ಹೋರಾಟ ತೀವ್ರಗೊಂಡಿತು. ಜೈಲಿನಲ್ಲಿ ಇದ್ದುಕೊಂಡು ನಿರಂತರ ಓದು ಮತ್ತು ಟಿಪ್ಪಣಿಗಳನ್ನು ಭಗತ್ ಸಿಂಗ್ ಬರೆದರು. ಅದು ಇಂದು ಜೈಲು ಡೈರಿಯಾಗಿ ಪ್ರಕಟಗೊಂಡಿದೆ. ಅದನ್ನು ಓದಿರಿ. ಜೊತೆಗೆ ನಾನೇಕೆ ನಾಸ್ತಿಕನಾದೆ ಎಂಬ ಪುಸ್ತಕವನ್ನು ಅವರು ಬರೆದಿದ್ದಾರೆ. ಅದನ್ನು ವಿದ್ಯಾರ್ಥಿಗಳು ಓದಲು ಸಾಧ್ಯವಾಗಬೇಕು. ಇಲ್ಲ ಕೇವಲ ಅವರ ಪೋಟೋ ಸ್ಟೇಟಸ್ ಹಾಕೊದರಿಂದ ಬದಲಾವಣೆ ಆಗುವುದಿಲ್ಲ. ಹೊಸ ಚಿಂತನೆಗೆ ನಾವು ಒಗ್ಗಬೇಕು. ಅದೇ ಇಂತಹ ಕ್ರಾಂತಿಕಾರಿಗಳಿಗೆ ಸಲ್ಲಿಸುವ ನಿಜವಾದ ಗೌರವ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷ ಚಂದ್ರು ರಾಠೋಡ ಪ್ರಸ್ತಾವಿಕ ಮಾತನಾಡಿ, ಭಗತ್ ಸಿಂಗ್, ರಾಜಗುರು, ಸುಖದೇವ ದೇಶದ ಸ್ವಾತಂತ್ರ್ಯ ಚಳುವಳಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ಆಶಯದ ಭಾರತ ಕಟ್ಟುವ ಕಾಯಕ ಇಂದಿನ ವಿದ್ಯಾರ್ಥಿಗಳು ಮಾಡಬೇಕು” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರು ಮಹೇಂದ್ರ ಜಿ. ಅವರು ಮಾತನಾಡಿ, “ಇಂದಿನ ಯುವ ಪೀಳಿಗೆಗೆ ಭಗತ್ ಸಿಂಗ್ ಅಂತಹ ನಿಜವಾದ ಹೀರೋಗಳು ಆದರ್ಶ ಮಾಡಿಕೊಳ್ಳಬೇಕು. ಆದರೆ ಇಂದಿನ ಸಾಮಾಜಿಕತೆಯಲ್ಲಿ ಸಿನಿಮಾ ನಟರೇ ಹೀರೋಗಳಾಗಿರುವುದು ಖೇಧಕರ. ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಅಧಿಕಾರಿಗಳಾಗಿ ಬರಬೇಕು. ಆ ರೀತಿಯಲ್ಲಿ ಭಗತ್ ಸಿಂಗ್ ಅಂತಹವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮವನ್ನು ಅಭಿಲಾಷ ನಿರ್ವಹಿಸಿದರು, ಪ್ರಾರ್ಥನೆಯನ್ನು ಭೀಮಾ ಘೊರ್ಪಡೆ ಹಾಗೂ ಸಂಗಡಿಗರು ಹಾಡಿದರು. ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಅನೀಲ್ ರಾಠೋಡ ಸ್ವಾಗತಿಸಿದರು ಮತ್ತು ನಾಗರಾಜ ವಂದಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹಾವೇರಿ ವಿ ವಿ ಉಳಿದರೆ ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ : ನಿವೃತ್ತ ಕುಲಪತಿ ಡಾ. ಎ. ಮುರಿಗೆಪ್ಪ
ಕಾರ್ಯಕ್ರಮದಲ್ಲಿ ಐ ಕ್ಯೂ ಎ ಎಸ್ ಸಂಚಾಲಕಾರು ಹನಮೇಶ ವಿಶ್ವನಾಥ. ಕೆ. ಎಸ್, ಅಜೀತ್ ಕುಮಾರ ಪೂಜಾರ್, ಬಿ ಕೆ ಹೊಸಳ್ಳಿ ವೇದಿಕೆಯಲ್ಲಿದ್ದರು. ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.