ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಿನ್ನೆ (ಮಾ.24) ಹಮಾಲರು ಮತ್ತು ದಲ್ಲಾಳಿಗಳ ನಡುವೆ ಜಗಳ ನಡೆದಿದ್ದು, ದಿನದ ಮಟ್ಟಿಗೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.
ಎಪಿಎಂಸಿಗೆ ಸೋಮವಾರ ಶೇಂಗಾ, ಜೋಳ ಹೆಚ್ಚಿನ ರೀತಿಯಲ್ಲಿ ಬಂದಿವೆ. ಹೀಗಾಗಿ ಉತ್ಪನ್ನಗಳನ್ನು ರಾಶಿ ಹಾಕುವ ವಿಚಾರಕ್ಕೆ ಮೊದಲಿಗೆ ಎರಡು ಅಂಗಡಿಗಳ ಹಮಾಲರ ನಡುವೆ ಜಗಳ ನಡೆದಿದೆ. ಈ ಜಗಳದಲ್ಲಿ ದಲ್ಲಾಳಿಗಳು ಮಧ್ಯ ಪ್ರವೇಶ ಮಾಡಿದ್ದರು. ಬಳಿಕ ಇದು ಹಮಾಲರು ಮತ್ತು ದಲ್ಲಾಳಿಗಳ ಜಗಳವಾಗಿ ಪರಿವರ್ತನೆಯಾಯಿತು ಎನ್ನಲಾಗಿದೆ.
ಇಬ್ಬರ ನಡುವಿನ ಜಗಳದ ಪರಿಣಾಮವಾಗಿ ಇಡೀ ದಿನ ವ್ಯಾಪಾರ ಸ್ಥಗಿತಗೊಂಡಿತು. ಸಂಜೆ ಹೊತ್ತಿಗೆ ಮುಖಂಡರ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದು ಟೆಂಡರ್ ಆರಂಭವಾಯಿತು. ಆದರೆ ತೂಕ ಲೆಕ್ಕ ಹಾಕುವ ಕಾರ್ಯವನ್ನು ಮಾರನೇ ದಿನಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಬಳ್ಳಾರಿ | ಸರ್ಕಾರಿ ಆದರ್ಶ ವಿದ್ಯಾಲಯದ ಪ್ರವೇಶ ಪತ್ರ ಪ್ರಕಟ
ಇಂದು ಬೆಳಗ್ಗೆ ತೂಕ ಲೆಕ್ಕಹಾಕುವ ಕಾರ್ಯ ಆರಂಭವಾಗಿದ್ದು, ಎಂದಿನಂತೆ ವ್ಯಾಪಾರ ನಡೆಯಲಿದೆ ಎಂದು ದಲ್ಲಾಳಿಗಳ ಸಂಘದ ಮುಖಂಡ ಗುರುಸ್ವಾಮಿ ತಿಳಿಸಿದ್ದಾರೆ.