ಮೈಸೂರು ಜಿಲ್ಲೆ,ವರುಣಾ ಕ್ಷೇತ್ರದ ಕೆಂಪಿಸಿದ್ದನ ಹುಂಡಿ ಗ್ರಾಮದಲ್ಲಿ ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಅನ್ಯಾಯವಾಗಿದ್ದು, ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ನೀರು ಸರಬರಾಜು ಕೇಂದ್ರದ ಮುಂದೆ 64 ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ರೈತರ ಭೂಮಿಯನ್ನು ಕಸಿದುಕೊಂಡ ಕೆಐಎಡಿಬಿ ಉದ್ಯೋಗವನ್ನು ಕೊಡಿಸಲು ವಿಫಲವಾದ ಕಾರಣ ಎಲ್ಲಾ ಕೈಗಾರಿಕೆಗಳಿಗೂ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಕೆಐಎಡಿಬಿ ಅಧಿಕಾರಿಗಳು ಯು ಬಿ ಕಾರ್ಖಾನೆಯಲ್ಲಿ 5 ಸದಸ್ಯರಿಗೆ ಮತ್ತು ಏಷಿಯನ್ ಪೈಂಟ್ ಕಾರ್ಖಾನೆಯಲ್ಲಿ 18 ಸದಸ್ಯರಿಗೆ ಉದ್ಯೋಗ ನೀಡುವ ಭರವಸೆ ನೀಡಿದರು.

ಆದರೆ, ಏಷಿಯನ್ ಪೇಂಟ್ ಕಾರ್ಖಾನೆಯಲ್ಲಿ 18 ಸದಸ್ಯರ ಪೈಕಿ ಐದು ಸದಸ್ಯರನ್ನು ಕಾರಣವಿಲ್ಲದೆ ಕೈ ಬಿಡಲಾಗಿದೆ. ಇದನ್ನು ರೈತರು ಒಂದು ವಾರದಿಂದ ಕೇಳಿದರು ಅಧಿಕಾರಿಗಳು ಉತ್ತರ ಕೊಡದ ಕಾರಣ ಹಾಗೂ ಬೆಳಿಗ್ಗೆಯಿಂದ ಸಂಜೆವರೆಗೂ ಕಾಯುತ್ತಾ ಕುಳಿತರು ಉತ್ತರ ದೊರೆಯದ ಕಾರಣ ಕೆಐಎಡಿಬಿ ಮೈಸೂರು ವಲಯ ಕಛೇರಿಯ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಶಿವಕುಮಾರ ಸ್ವಾಮೀಜಿ 118 ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ
ಎಐಕೆಕೆಎಂಎಸ್ ನ ಬಸವರಾಜು ಹೆಚ್ ಎಂ, ರೈತರಾದ ರವಿ ಕುಮಾರ್, ಉಮೇಶ್, ಮಂಜು, ವಸಂತ್ ಕುಮಾರ್, ಸೌಭಾಗ್ಯ, ವಸಂತ, ಶಿವಮ್ಮ ಮುಂತಾದವರು ಧರಣಿಯಲ್ಲಿ ಇದ್ದಾರೆ.