ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ದಿನಾಂಕ 28 ಮಾರ್ಚ್ 2025 ರಂದು ಮೈಸೂರು ಜಿಲ್ಲೆ, ಪಿರಿಯಾಪಟ್ಟಣದ ಅರಸು ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ, ಸಮಾಜದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುವ ಮಹಿಳಾ ಪೌರ ಕಾರ್ಮಿಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ‘ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಮತ್ತು ಯುಗಾದಿ ಸಂಭ್ರಮೋತ್ಸವ ‘ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ನಂಜುಂಡೇಗೌಡ ನಂಜುಂಡ ಪತ್ರಿಕಾ ಹೇಳಿಕೆ ನೀಡಿದರು.
ಸಮಾರಂಭದಲ್ಲಿ ಹಗಲು ಇರುಳು ಎನ್ನದೆ, ಯಾವುದೇ ಪ್ರತಿಫಲಾಕಾಂಕ್ಷೆಗಳು ಇಲ್ಲದೆ , ಸಮಾಜದ ಸ್ವಾಸ್ತ್ಯವನ್ನು ಕಾಪಾಡುತ್ತಿರುವ ಹೆಮ್ಮೆಯ ಮಹಿಳಾ ಪೌರ ಕಾರ್ಮಿಕರಿಗೆ ಅಭಿನಂದನಾ ಸಮಾರಂಭ ಹಾಗೂ ಗುರುತ್ತರ ಸೇವೆ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಕ್ಷಮ ಪ್ರಾಧಿಕಾರದ ಭೂಸ್ವಾಧೀನಾಧಿಕಾರಿ ವಿ ಆರ್ ಶೈಲಜರವರು ವಹಿಸಲಿದ್ದು, ಉದ್ಘಾಟನೆಯನ್ನು ತಹಶೀಲ್ದಾರ್ ನಿಸರ್ಗಪ್ರಿಯ ನೆರವೇರಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ರೈತ ಕುಟುಂಬಗಳಿಗೆ ಅನ್ಯಾಯ; ಅಹೋರಾತ್ರಿ ಧರಣಿ
ಮುಖ್ಯ ಅತಿಥಿಗಳಾಗಿ ಸಿಡಿಪಿಒ ಮಮತಾ, ಪುರಸಭೆ ಮುಖ್ಯಧಿಕಾರಿ ಕೊಟ್ಟುಕೊತ್ತೀರ ಮುತ್ತಪ್ಪ , ಪೊಲೀಸ್ ಸಬ್ ಇನ್ಸ್ಪೆಕ್ಟರ್ ನವ್ಯ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ ಆರ್ ಬಿ ಶೋಭಾ,ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹೊಸಳ್ಳಿ ಕೃಷ್ಣೆಗೌಡ, ವಿಶೇಷ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪಂಚಾಯತಿ ಅಭಿವೃದಿ ಅಧಿಕಾರಿ ಡಾ ಶೋಭಾ ರಾಣಿ ಭಾಗವಹಿಸಲಿದ್ದಾರೆ ಎಂದರು.