ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಹಾಗೂ ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುವೆ ಕಲ್ಮನೆ ಗ್ರಾಮದಲ್ಲಿ ಬುಧವಾರ ನಡೆದಿದೆ. ನಿಂದನೆಗೆ ಒಗೊಳಗಾದ ಮಹಿಳೆ ಸುಮಿತ್ರ (40), ಕುವೆ ಕಲ್ಮನೆ ಗ್ರಾಮಕ್ಕೆ ಕೆ ಬಿ ಮಹೇಶ್ ಎಂಬುವರನ್ನು ಮದುವೆ ಆಗಿ 15 ವರ್ಷವಾಗಿದೆ. 4 ವರ್ಷಗಳ ಹಿಂದೇ, ಹೃದಯಾಘಾತದಿಂದ ಸುಮಿತ್ರ ಅವರ ಪತಿ ಸಾವನಪ್ಪಿದ್ದಾರೆ. ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಮಹಿಳೆ, ಕೂಲಿ ಕೆಲಸವನ್ನೇ ಅವಲಂಬಿಸಿ ಜೀವನ ಕಟ್ಟಿಕೊಂಡಿದ್ದಾರೆ.

ಇದೇ ತಿಂಗಳು 19ರಂದು ಬೆಳಗ್ಗೆ ಹಾಲು ತರಲು ಪಕ್ಕದ ಮನೆಗೆ ತೆರಳುವಾಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಹೇಮಾ ಎಂಬ ಮಹಿಳೆ ಏಕಾಏಕಿ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಚಪ್ಪಲಿಯಲ್ಲಿ ಒಡೆದಿದ್ದಾರೆ. ಹಾಗೆಯೇ, ಸಂಜೆ ಸಮಯದಲ್ಲಿ ಹೇಮಾ ಅವರ ಪತಿ ಮಂಜುನಾಥ್ ಎರಡು ಸಲ ಮನೆ ಬಳಿ ಬಂದು ಬೆದರಿಕೆ ಹಾಗೂ ಜಾತಿ ನಿಂದಿಸಿದ್ದಾರೆ, ಭಯದಿಂದ ಪಕ್ಕದವರ ಮನೆಯಲ್ಲಿ ರಾತ್ರಿ ಉಳಿದು, 20ರಂದು ಮಹಿಳೆ ಆಸ್ಪತ್ರೆ ಚಿಕಿತ್ಸೆ ಪಡೆದ, ನಂತರ 22ರಂದು ಅಖಿಲ ಕರ್ನಾಟಕ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಆಶಾ ಮತ್ತು ಸಂತೋಷ್ ಅವರ ಸಹಾಯದಿಂದ ಪೊಲೀಸ್ ಕೇಸ್ ಕೊಟ್ಟಿದ್ದೇನೆ, ಎಂದು ಸುಮಿತ್ರ ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.

ಮಹಿಳೆಯರ ಮೇಲೆ ಇಂತಹ ಘಟನೆಗಳು ಹೆಚ್ಚಾಗುತ್ತಿವೆ ಇದು ಅಧಿಕಾರಿಗಳು ಗಮನ ಅರಿಸಬೇಕಾಗಿದೆ. ಹಾಗೆಯೇ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಹೇಮಾ ಅವರು ಸುಮಿತ್ರ ಎಂಬ ಮಹಿಳೆಗೆ ಚಪ್ಪಲಿಯಿಂದ ಒಡೆದು,ಜಾತಿ ನಿಂದಿಸಿ ಬೆದರಿಕೆ ಹಾಕಿದ್ದರಿಂದ, ಸುಮಿತ್ರ ಅವರು ಬಾಳೂರು ಪೊಲೀಸ್ ಠಾಣೆಯಲ್ಲಿ ಹೇಮಾ ಮತ್ತು ಮಂಜುನಾಥ್ ವಿರುದ್ಧ ಅಟ್ರಾಸಿಟಿ ಕೇಸು ದಾಖಲಿಸಲಾಗಿದೆ, ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಆಶಾ ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಲೆನಾಡಿನಲ್ಲಿ ಬೆಳ್ಳಂಬೆಳಗ್ಗೆ ವರುಣನ ಅಬ್ಬರ
ಯಾರೇ ಆಗಲಿ ತಪ್ಪು ಮಾಡಿದ್ದಾರೆ ಎಂದಾದರೆ ಶಿಕ್ಷೆ ಕೊಡಲು ಕಾನೂನು ವ್ಯವಸ್ಥೆ ಇದೆ. ಅದರಲ್ಲೂ ಮಹಿಳೆಯರ ಮೇಲೆ ಇತ್ತೀಚಿನ ದಿನಗಳಲ್ಲಿ ಜಾತಿನಿಂದನೆ, ದೌರ್ಜನ್ಯ, ಅತ್ಯಾಚಾರ, ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಇಂತಹ ಸಮಸ್ಯೆಯನ್ನು ಆಡಳಿತ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ನೊಂದವರಿಗೆ ನ್ಯಾಯ ಸಿಗಲಿ ಎಂದು ಆಶಿಸೋಣ.