ಸಾಲ ಬಾದೆ ತಾಳಲಾರದೆ ತುಂಗಾ ನದಿಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ರೈತ ದೇವು (57) ಭಾನುವಾರ ಮಧ್ಯಾಹ್ನ ಮನೆ ಬಿಟ್ಟು ಹೋದವರು ಹಿಂದಿರುಗಿ ಬಂದಿರಲಿಲ್ಲ. ಸಂಜೆ ವೇಳೆಗೆ ತುಂಗಾ ನದಿ ದಡದಲ್ಲಿ ಅವರ ಚಪ್ಪಲಿ ಕಂಡುಬಂದಿತ್ತು. ಸಂಜೆ 6.45ಗಂಟೆ ಸುಮಾರಿಗೆ ನದಿಯಲ್ಲಿ ಶವ ಪತ್ತೆಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಹಿಳೆಗೆ ಚಪ್ಪಲಿಯಿಂದ ಹಲ್ಲೆ, ಜಾತಿ ನಿಂದನೆ ಆರೋಪ; ದೂರು ದಾಖಲು
ರೈತ ದೇವು ಅವರಿಗೆ ನಾಲ್ಕು ಎಕರೆ ಜಮೀನು ಇರುವು ಹೊಂದಿದ್ದರಿಂದ, ಜಮೀನು ಅಭಿವೃದ್ಧಿಗಾಗಿ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರು, ಸಾಲದಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು, ದೇವು ಅವರ ಮಗ ನಿರಂಜನ ಪೋಲಿಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
