ಬಗರ್ ಹುಕ್ಕುಂ ಸಾಗುವಳಿ ಹಾಗೂ ಭೂಹೀನ ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟಿಸಿದ ರೈತರನ್ನು ಹಾಗೂ ರೈತರ ಚಳುವಳಿಯನ್ನು ಅಪಮಾನಿಸಿದ ಗುಬ್ಬಿ ತಾಲ್ಲೂಕು ತಹಶೀಲ್ದಾರ್ ಕ್ಷಮೆ ಕೇಳುವಂತೆ ಒತ್ತಾಯಿಸಿ ಮಂಗಳವಾರ ಗುಬ್ಬಿ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಬಗರ್ ಹುಕ್ಕುಂ ಸಾಗುವಳಿದಾರ ರೈತರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ಮನವಿ ನೀಡಿ ವಾಪಾಸ್ ಆಗುವ ಸಂದರ್ಭದಲ್ಲಿ ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಮದ್ಯ ಪ್ರವೇಶ ಮಾಡಿದ್ದಲ್ಲದೆ, ತಹಶೀಲ್ದಾರ್ ಗೆ ತಿಳಿಹೇಳುವ ಬದಲು ರೈತ ಚಳುವಳಿಯನ್ನು ಸರ್ವಾಧಿಕಾರಿ ಗೂಂಡ ವರ್ತನೆಯಿಂದ ಅಪಮಾನಿಸಿರುವುದನ್ನು ಸಿ.ಪಿ.ಐ.(ಎಂ) ಪಕ್ಷದ ತುಮಕೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಸಿಪಿಐಎಂ ಪಕ್ಷದಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಡಳಿತ ಪಕ್ಷದ ಶಾಸಕ ಎಂಬುದನ್ನು ಮರೆತು ದರ್ಪದಿಂದ ರೈತಸಂಘ ಮುಂಖಡರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೋಲಿಸರ ಮೇಲೆ ಬಹಿರಂಗವಾಗಿ ಒತ್ತಡ ಹಾಕಿದ್ದಾರೆ ಬಗರ್ ಹುಕ್ಕುಂ ಸಾಗುವಳಿ ಮತ್ತು ಭೂಹೀನ ರೈತರು ಸಂಘಟಿತವಾಗಿ ಪ್ರಜಾಪ್ರಭುತ್ವ ರೀತಿಯಲ್ಲಿ ತಮ್ಮ ಬೇಡಿಕೆಗಳ ಹೀಡೆರಿಕೆಗೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಆರ್ಜಿ ಸಲ್ಲಿಸುವುದನ್ನು ಮಹಾ ಆಪರಾಧವೆಂದು ಬಿಂಬಿಸಲು ತಹಶೀಲ್ದಾರ್‌ರವರ ಜೊತೆ ಶಾಮೀಲು ಆಗಿರುವುದು ಕ್ಷೇತ್ರದ ಜನತೆಗೆ ಮಾಡಿರುವ ದ್ರೋಹವಾಗಿದೆ, ರಾಜ ಪ್ರಭುತ್ವದ ಉತ್ತಾರಾಧಿಕಾರಿಗಳಂತೆ ವರ್ತಿಸುವ ಗುಬ್ಬಿ ತಾಲ್ಲೂಕು ತಹಶೀಲ್ದಾರ್ ಮತ್ತು ಶಾಸಕರಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯದಂತೆ ನಡೆದು ಕೊಳ್ಳಬೇಕೆಂದು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರು ದೇಶದ ಬೆನ್ನೆಲುಬಾದ ರೈತರು ಮತ್ತು ರೈತ ಚಳುವಳಿಯನ್ನು ಆಪಮಾನಿಸುವುದನ್ನು ನಿಲ್ಲಿಸಬೇಕೆಂದು ತಿಳಿಹೇಳಬೇಕೆಂದು ಸಿ.ಪಿ.ಐ.(ಎಂ) ಪಕ್ಷ ಆಗ್ರಹಿಸಿದೆ.
ಶಾಸಕರು ಮತ್ತು ತಹಶೀಲ್ದಾರ್ ಬೇಸಿಗೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ಮೇವು ಕುಡಿಯುವ ನೀರಿನ ವ್ಯವಸ್ಥೆಮಾಡಲು ತುರ್ತು ಕ್ರಮವಹಿಸುವಂತೆ ಸಿ.ಪಿ.ಐ.(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯರಾದ ಸೈಯದ್ ಮುಜೀಬ್, ಜಿಲ್ಲಾ ಮುಖಂಡರಾದ ಬಿ. ಉಮೇಶ್ ಒತ್ತಾಯಿಸಿದ್ದಾರೆ.