ಬೀದರ್ ನಗರದ ಹಳೆ ನಾವದಗೇರಿಯ ಅಂಗಡಿಯೊಂದರಲ್ಲಿ ʼಅನ್ನಭಾಗ್ಯʼ ಯೋಜನೆಯಡಿ ವಿತರಿಸುವ ಪಡಿತರ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿದ ಮಾಹಿತಿಯ ಮೇರೆಗೆ
ಮಾರ್ಕೆಟ್ ಪೊಲೀಸ್ ಠಾಣೆ ಪಿಎಸ್ಐ ಸಿದ್ದಣ್ಣ ಗಿರಿಗೌಡರ್ ಹಾಗೂ ಆಹಾರ ನೀರಿಕ್ಷಕರಾದ ಶೋಭಾ, ರೋಮರತನ ದೇಗಲೆ ಅವರು ಶೆಟರ್ ಅಂಗಡಿ ಮೇಲೆ ದಾಳಿ ಮಾಡಿ ₹3.99 ಲಕ್ಷ ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.
ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ 243 ಚೀಲಗಳಲ್ಲಿ ಸಂಗ್ರಹಿಸಿದ ಸುಮಾರು 117.50 ಕೆ.ಜಿ. ಪಡಿತರ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಂತೋಷ, ಸಿದ್ರಾಮ, ವಿಜಯಕುಮಾರ, ಫಾರೂಕ್ ಅಹಮ್ಮದ್, ಆಹಾರ ಪಾಲ್ಗೊಂಡಿದ್ದರು. ಈ ಸಂಬಂಧ ಓರ್ವ ಆರೋಪಿ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ