ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಹರೇಕಳ ಕಚೇರಿಯಲ್ಲಿ ನಿನ್ನೆ ಬೃಹತ್ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಸುಮಾರು 450 ಜನರು ಜಾತಿ ಧರ್ಮದ ಭೇದವನ್ನು ಮರೆತು ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಕೂಟಕ್ಕೂ ಮೊದಲು ಪಕ್ಷದ ಹಿರಿಯ ನೇತಾರ ಕೆ.ಎಚ್ ಹಮೀದ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಜಮೀನ್ದಾರಿ ಪದ್ದತಿ ವಿರುದ್ದ ಹಮೀದ್ ಅವರು ಸೆಟೆದು ನಿಂತಿದ್ದರು. ಅಂದಿನ ಕಾಲಘಟ್ಟದಲ್ಲಿ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿತ್ತು. ಜೈಲು ವಾಸ ಅನುಭವಿಸಿ ಭೂಗತರಾಗಿಯೂ ಕೆಲಸ ಮಾಡಿದ್ದರು” ಎಂದರು.
ಇದನ್ನೂ ಓದಿ: ಮಂಗಳೂರು | ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್ ನಿಧನ
ಕಾರ್ಯಕ್ರಮದಲ್ಲಿ ಮುನೀರ್ ಕಾಟಿಪಳ್ಳ ,ಯಾದವ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಕೃಷ್ಣಪ್ಪ ಸಾಲ್ಯಾನ್, ರಮೇಶ್ ಉಳ್ಳಾಲ್, ಡಾ.ಜೀವನ್ ರಾಜ್ ಕುತ್ತಾರ್, ನ್ಯಾಯವಾದಿ ನಿತಿನ್ ಕುತ್ತಾರ್, ವಿಲಾಸಿನಿ, ನಳಿನಾಕ್ಷಿ, ದಿವ್ಯರಾಜ್, ದುಗ್ಗಪ್ಪ ಪಾವೂರು, ಸುಂದರ ಹರೇಕಳ, ಸುರಕ್ಷಿತ್ ಭಂಡಾರಿ, ವಾಮಯ್ಯ ಪೂಜಾರಿ, ಜನಾರ್ಧನ ಅಮೀನ್, ದಿವ್ಯರಾಜ್ ಕುತ್ತಾರ್, ಸುನೀಲ್ ತೇವುಲ, ಶೇಖರ್ ಕುಂದರ್, ಅಬೂಬಕ್ಕರ್ ಜಲ್ಲಿ, ರಝಾಕ್ ಮುಡಿಪು, ರಫೀಕ್ ಹರೇಕಳ, ಜಗದೀಶ್ ಬಜಾಲ್, ಧೀರಜ್ ಬಜಾಲ್, ಅನ್ಸಾರ್ ಬಜಾಲ್, ವರಪ್ರಸಾದ್, ಸಾದಿಕ್ ಕಣ್ಣೂರು, ಪಂಚಾಯತ್ ಸದಸ್ಯರಾದ ಬದ್ರುದ್ದೀನ್ ಹರೇಕಳ, ಸತ್ತಾರ್ ನ್ಯೂಪಡ್ಪು, ಅಶ್ರಫ್ ಹರೇಕಳ, ಮುಂತಾದವರು ಪಾಲ್ಗೊಂಡಿದ್ದರು.