“ಗೋಗೇರಿ ಗ್ರಾಮದಲ್ಲಿ ಹಲವಾರು ದಶಕಗಳಿಂದ ಜಾತ್ರೆ, ಉರುಸು, ಮೊಹರಮ್ ಸೇರಿದಂತೆ ಎಲ್ಲ ಹಬ್ಬಗಳನ್ನು ಹಿಂದೂ ಮುಸ್ಲಿಮರು ಒಟ್ಟಾಗಿ ಇದೇ ತಿಂಗಳು 28ಕ್ಕೆ ಸೌಹಾರ್ದ ಇಫ್ತಾರ ಕೂಟ ಆಯೋಜಿಸಿದ್ದು, ಭಾವೈಕ್ಯತೆಯಿಂದ ಆಚರಿಸುತ್ತಾರೆ” ಎಂದು ಗ್ರಾಮಸ್ಥ ಆರ್ ಕೆ ಬಾಗವಾನ್ ತಿಳಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಗೊಗೇರಿ ಗ್ರಾಮದಲ್ಲಿ ಪತ್ರಿಕಾ ಉದ್ದೇಶಿಸಿ ಮಾತನಾಡಿದ ಅವರು, “ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರೀ ಶರಣಬಸವೇಶ್ವರ ದೇವಸ್ಥಾದಲ್ಲಿ 4ನೇ ವರ್ಷದ ಸೌರ್ಹಾದ ಇಫ್ತಾರ ಕೂಟ ಏರ್ಪಡಿಸಲಾಗಿದೆ” ಎಂದರು.
“ಗ್ರಾಮದಲ್ಲಿ ಪ್ರತಿವರ್ಷ ತುಳಜಾಭವಾನಿ ಜಾತ್ರೆ, ಹುಸೇನಪೀರಾ, ದರಗಾದ ಉರುಸು, ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದ ಜಾತ್ರೆ, ಹೊನ್ನಕೆರೆ ಮಲ್ಲಯ್ಯನ ಜಾತ್ರೆ, ರಂಜಾನ್, ಮೊಹರಮ್ ಹಬ್ಬಗಳಲ್ಲಿ ಹಿಂದು-ಮುಸ್ಲಿಮರು ಒಟ್ಟಾಗಿ ಆಚರಿಸುತ್ತಾ ಬಂದಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಗುಳೆ ತಪ್ಪಿಸಲು ಕೈಗೊಂಡ ಸಾವಯವ ಆಹಾರೋದ್ಯಮ; ಸಬಲೀಕರಣದತ್ತ ಮಹಿಳೆಯರ ಹೆಜ್ಜೆ
“ಈ ಗೋಗೇರಿ ಗ್ರಾಮದಲ್ಲಿ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠಕ್ಕೆ ಮುಸಲ್ಮಾನರು ಹಾಗೂ ಹುಸೇನಪೀರಾ ದರಗಾದಕ್ಕೆ ಹಿಂದೂಗಳು ಅಧ್ಯಕ್ಷರಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಮಾದಾರಿಯಾಗಿದ್ದು, ಸೌಹಾರ್ದ ಇಫ್ತಾರ ಕೂಟವನ್ನು ಏರ್ಪಡಿಸಿದ್ದು, ಎಲ್ಲ ಭಾಂದವರು ಭಾಗವಹಿಸಬೇಕು” ಎಂದು ಆರ್ ಕೆ ಭಾಗವಾನ್ ತಿಳಿಸಿದರು.