ಕಳೆದ ಕೆಲ ದಿನಗಳಿಂದ ಫೆಲಿನಾ ಪ್ಯಾನಲಿಕೊಪೆನಿಯಾ ವೈರಸ್‌ಗೆ (ಎಫ್‌ಪಿವಿ) ಸುಮಾರು ಜಿಲ್ಲೆಯಲ್ಲಿ 38ಕ್ಕೂ ಹೆಚ್ಚು ಬೆಕ್ಕುಗಳು ಮೃತಪಟ್ಟಿವೆ ಎಂದು ವರದಿಯಾಗಿದೆ.ಜಿಲ್ಲೆಯಲ್ಲಿ ಹಕ್ಕಿಜ್ವರದಿಂದ ಪಕ್ಷಿಗಳ ಮಾರಣಹೋಮ ನಡೆದಿದ್ದರೆ, ಈಗ ಈ ವೈರಸ್ ನಿಂದ ಬೆಕ್ಕುಗಳುಗೆ ಕುತ್ತು ಬಂದಿದೆ.
ಬೆಕ್ಕುಗಳಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದೆ ಸಾವನ್ನಪ್ಪುತ್ತಿವೆ. ಪರ್ಶಿಯನ್ ಬೆಕ್ಕುಗಳನ್ನು ಸಾಕಿಕೊಂಡಿರುವ ಪ್ರಾಣಿಪ್ರಿಯರಲ್ಲಿ ಈಗ ಆತಂಕ ಹೆಚ್ಚಾಗುತ್ತಿದೆ. ಎಲ್ಲ ಜಾತಿಯ ಬೆಕ್ಕುಗಳಿಗೂ ಈ ವೈರಸ್ ಹರಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಳೆದ 20 ದಿನಗಳಲ್ಲಿ 70 ಬೆಕ್ಕುಗಳಲ್ಲಿ ವೈರಸ್ ಕಾಣಿಸಿಕೊಂಡಿದೆ. ಅದರಲ್ಲಿ 38 ಬೆಕ್ಕುಗಳು ಸಾವನ್ನಪ್ಪಿವೆ.
ವಿಚಿತ್ರ ಕಾಯಿಲೆಯಿಂದ ಬೆಕ್ಕುಗಳ ಸ್ಥಿತಿ ನೋಡಿ ಬೆಕ್ಕು ಸಾಕಿದ ಮಾಲೀಕರಲ್ಲಿ ಆತಂಕ ಸೃಷ್ಟಿಯಾಗಿದೆ.ಈ ಬಗ್ಗೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್.ಎಸ್.ಪಾಟೀಲ್ ಮಾತನಾಡಿ, ಈ ವೈರಸ್ ಇಂದು ನಿನ್ನೆಯದ್ದಲ್ಲ ಅನೇಕ ವರ್ಷಗಳಿಂದ ಇದೆ ಆದರೆ ಬಯಲಿಗೆ ಬರುತ್ತಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಲಿಂಗಸುಗೂರು | ಕರ್ತವ್ಯಲೋಪ; ಪುರಸಭೆ ಮುಖ್ಯಾಧಿಕಾರಿ ಅಮಾನತು
ಬೆಕ್ಕುಗಳು ಚಿಕ್ಕ ಮೂರು ವಾರದ ಮರಿಗಳಿದ್ದಾಗಲೇ ವ್ಯಾಕ್ಸಿನೇಶನ್ ಮಾಡಬೇಕಿದೆ. ಅದಾದ ಬಳಿಕ ಬೂಸ್ಟರ್ ಡೋಸ್ ನೀಡಬೇಕು. ಆದರೆ, ಈ ವ್ಯಾಕ್ಸಿನ್ ಸರ್ಕಾರದಿಂದ ಪೂರೈಕೆಯಾಗುತ್ತಿಲ್ಲ. ಖಾಸಗಿಯವರಿಂದಲೇ ಖರೀದಿಸಬೇಕಿದ್ದು, 900 ರೂ. ಖರ್ಚಾಗುತ್ತದೆ. ಬೆಕ್ಕು ಸಾಕಿದವರು ವ್ಯಾಕ್ಸಿನ್ ಹಾಕಿಸಿದರೆ ಬೀದಿ ಬೆಕ್ಕುಗಳಿಗೆ ಯಾವುದೇ ವ್ಯಾಕ್ಸಿನ್ ಸಿಗದೆ ಬೇಗನೇ ವೈರಸ್‌ಗೆ ತುತ್ತಾಗುತ್ತಿವೆ. ಇದು ಬೆಕ್ಕುಗಳಿಂದ ಬೆಕ್ಕುಗಳಿಗೆ ಮಾತ್ರ ಹರಡುತ್ತದೆ. ಈ ವೈರಸ್ ಮನುಷ್ಯರಿಗೆ ಯಾವುದೇ ಅಪಾಯ ತರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.