ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ದಸಂಸ (ಅಂಬೇಡ್ಕರ್ ವಾದ) ಸಂಘಟನೆ ವತಿಯಿಂದ ‘ ಭಾರತದ ಅಸ್ಪೃಶ್ಯರ ಪ್ರತಿರೋಧ ಚಳವಳಿ, ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಶೋಷಿತರ ಸಂಘರ್ಷ ದಿನಾಚರಣೆ ‘ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ‘ ಮಹಾಡ್ ಸತ್ಯಾಗ್ರಹ ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು ‘ ಎಂದರು.
” ಕುಡಿಯುವ ನೀರಿಗಾಗಿ ಕೈಗೊಂಡ ಮಹಾಡ್ ಸತ್ಯಾಗ್ರಹ ಭಾರತದ ಅಸ್ಪೃಶ್ಯರ ಮೋದಲ ಪ್ರತಿರೋಧ ಚಳುವಳಿ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿರುವ ಮಹಾಡ್‌ನಲ್ಲಿ 1927ರ ಮಾರ್ಚ್ 20ರಂದು ಸಾರ್ವಜನಿಕವಾಗಿ ಕೆರೆಯ ನೀರನ್ನು ಸ್ಪರ್ಶಿಸುವ ಮೂಲಕ ಇದು ಎಲ್ಲರಿಗೂ ಸೇರಿದ್ದು ಎಂದು ಸಾರಿ ಹೇಳಿ ಮಾನವ ಹಕ್ಕುಗಳನ್ನು ಎತ್ತಿಹಿಡಿದವರು ಡಾ ಬಿ ಆರ್ ಅಂಬೇಡ್ಕರ್ ” ಎಂದರು.
ಅಂಬೇಡ್ಕರ್ ಅಧ್ಯಾಯನ ಸಂಸ್ಥೆಯ ಪ್ರಾಧ್ಯಾಪಕ ಜೆ ಸೋಮಶೇಖರ್ ಮಾತನಾಡಿ ” ಸ್ವಾತಂತ್ರ್ಯ ಬಂದು 78 ವರ್ಷ ಕಳೆದು, ಆಧುನಿಕ ತಂತ್ರಜ್ಞಾನ ಬೆಳೆದರು ಜಾತಿ ವ್ಯವಸ್ಥೆ ಗಟ್ಟಿಯಾಗಿ ಉಳಿದಿದೆ. ಅಂಬೇಡ್ಕರ್ ಎಂದರೆ ಜ್ಞಾನ ಮತ್ತು ಪ್ರಜ್ಞೆ, ಮುಂಬಯಿಯಲ್ಲಿ 1923ರಲ್ಲಿ ಅಲ್ಲಿನ ಪುರಸಭೆ ಕೆರೆ ಕಟ್ಟೆಗಳನ್ನು ಸಾರ್ವಜನಿಕ ಸ್ಥಳ ಎಂದು ಘೋಷಣೆ ಮಾಡಿತ್ತು. 1927ರಲ್ಲಿ ಚೌದರ್ ಕೆರೆಯ ನೀರನ್ನು ಮುಟ್ಟುವ ಮೂಲಕ ನವ ಭಾರತದ ಹೊಸ ಚರಿತ್ರೆ ಸೃಷ್ಟಿಸಿದರು ಎಂದರು. ಸಂವಿಧಾನದ ಮೂಲಕ ಶಿಕ್ಷಣದ ಹಕ್ಕು, ಮಾತನಾಡುವ ಹಕ್ಕು ಸಿಕ್ಕಿದೆ, ದೌರ್ಜನ್ಯ ವಿರುದ್ಧ ಕಾಯ್ದೆ ಇದ್ದರು ಸಮಾಜದಲ್ಲಿ ಶೋಷಣೆ ನಡೆಯುತ್ತಿದೆ. ಶೋಷಿತರನ್ನು ವಿಶ್ವಾಸದಿಂದ ಜೊತೆಯಲ್ಲಿ ಕರೆದುಕೊಂಡು ಹೋಗುವ ಮನಸ್ಥಿತಿ ಎಲ್ಲರಲ್ಲೂ ಬರಬೇಕು ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹಿಳಾ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ; ಶಾಸಕ ಹೆಚ್ ಎಂ ಗಣೇಶ್ ಪ್ರಸಾದ್
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ಜಿಲ್ಲಾ ಸಂಚಾಲಕ ಮಲ್ಲಳ್ಳಿ ನಾರಾಯಣ್, ಸಂಘಟನ ಸಂಚಾಲಕ ದೊಡ್ಡಸಿದ್ದು ಹಾದನೂರು, ವಿಭಾಗಿಯ ಸಂ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ಐಲಾಪುರ ರಾಮು, ರಾಜ್ಯ ಸಮಿತಿ ಸದಸ್ಯ ಅಂಬುಗ ಮಲ್ಲೇಶ್, ವಿಭಾಗಿಯ ಸಂಚಾಲಕ ಹಾಲೇಶಪ್ಪ, ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಧಮ್ಮ ಆಶೋಕ್, ಜಿಲ್ಲಾ ಸಂಚಾಲಕಿ ಅನುಷಾ, ಬೊಮ್ಮನಹಳ್ಳಿ ಕುಮಾರ್, ಕಳ್ಳಿ ಮುದ್ದನಹಳ್ಳಿ ಚಂದ್ರು, ವಾಟಾಳು ನಾಗರಾಜು, ಕರಡಿಪುರ ಕುಮಾರ್, ದೆವರಸಹಳ್ಳಿ ಬಸವರಾಜು, ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಸಂಚಾಲಕ ಸಣ್ಣ ಕುಮಾರ್, ಕೂಡಗಿ ಗೋವಿಂದರಾಜು, ಸಂಘಟನಾ ಸಂಚಾಲಕ ಭೋಗೇಶ್ವರ ಕಾಲೋನಿ ಕಾಳಪ್ಪಾಜಿ, ರಾಚಪ್ಪ, ಮಹೇಶ್, ಆನಂದ, ಉದಯ್, ಶಮಿವುಲ್ಲಾ, ಚೆಲುವರಾಜು, ಕುಮಾರ್, ಹಾದನೂರು ಚಂದ್ರ, ಮಹದೇವಸ್ವಾಮಿ, ನಾಗೇಂದ್ರ, ಕೃಷ್ಣ ಕುರ್ಣೆಗಾಲ, ಶಿವರಾಜು, ಕೆಂಪರಾಜು, ಶಿವರುದ್ರ, ರಾಣಿ, ಪಾರ್ವತಿ, ಸೀರಮ್ಮ, ಸ್ವಪ್ನ,ಕಾವ್ಯ ಸೇರಿದಂತೆ ಇನ್ನಿತರರು ಇದ್ದರು.