ದೇವಿನಗರ ಹಾಗೂ ಚಂದ್ರಬಂಡಾ ರಸ್ತೆಯಲ್ಲಿರುವ ಸಿದ್ರಾಮೇಶ್ವರ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ನಿರ್ಲಕ್ಷ್ಯ ವಹಿಸಿದ್ದು ಕೂಡಲೇ ಕುಡಿಯುವ ನೀರು ಸರಬರಾಜಿಗೆ ಕ್ರಮ ವಹಿಸಬೇಕು ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಹಾ ನಗರ ಪಾಲಿಕೆ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಗರದ ಸಿದ್ರಾಮೇಶ್ವರ ಬಡಾವಣೆಯಲ್ಲಿ ಕುಡಿಯುವ ನೀರು, ಸಮರ್ಪಕ ರಸ್ತೆ, ಚರಂಡಿ ಕಾಲುವೆ, ವಿದ್ಯುತ್ ದೀಪ, ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು,
ಈ ಬಡಾವಣೆಯಲ್ಲಿ ಕೆಲ ರಾಜಕೀಯ ಮುಖಂಡ ಹಿಂಬಾಲಕರು ದೌರ್ಜನ್ಯ ಮಾಡುತ್ತಿದ್ದು ಕ್ರಮ ಕೈಗೊಳ್ಳಬೇಕು, ಬಡವರಿಗೆ ಕಾನೂನು ರಕ್ಷಣೆ ನೀಡಬೇಕು. ಹಾಗೂ , ಸರಕಾರಿ ಜಾಗವನ್ನು ಹದ್ದುಬಸ್ತು ಮಾಡಿಸಿ ಕೂಡಲೇ ತಹಶೀಲ್ದಾರರು, ಮಹಾನಗರಪಾಲಿಕೆಯ ಅಧಿಕಾರಿಗಳು ಜಂಟಿ ಪರಿಶೀಲನೆಗೆ ಮುಂದಾಗಿ, ಕಡುಬಡವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ಡಿ ಓದಿದ್ದೀರಾ? ರಾಯಚೂರು | ಎಫ್‌ಪಿವಿ ವೈರಸ್‌ಗೆ ರಾಯಚೂರಿನಲ್ಲಿ 38 ಬೆಕ್ಕುಗಳು ಬಲಿ
ಸಿದ್ರಾಮೇಶ್ವರ ಬಡಾವಣೆಯಲ್ಲಿ ಸಮೀದಲ್ಲಿ ಎರಡು ಟ್ಯಾಂಕರ್‌ಗಳಿದ್ದು ಪೈಪ್‌ಲೈನ್ ಮೂಲಕ ಸಂಪರ್ಕ ಒದಗಿಸಿ ನೀರು ಸರಬರಾಜಿಗೆ ಕ್ರಮ ವಹಿಸಬೇಕು, ಇದೀಗ ಬೇಸಿಗೆ ಇರುವುದರಿಂದ ತಾತ್ಕಾಲಿಕವಾಗಿ ಮಹಾ ನಗರ ಪಾಲಿಕೆಯ ಅನುದಾನದಲ್ಲಿ ನೀರಿನ ಟ್ಯಾಂಕರ್ ಮೂಲಕ ಸರಬರಾಜು, ಜೊತೆಗೆ ಬೋರ್‌ವೆಲ್‌ಗಳನ್ನು ಹಾಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಬೇಡಿಕೆಗೆ ಕ್ರಮ ಕೈಗೊಳ್ಳದಿದ್ದರೆ ಮಹಾ ನಗರ ಪಾಲಿಕೆ ವಿರುದ್ಧ ಚಕ್ರ ಕೈಗೊಳ್ಳಬೇಕು, ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ, ಚಂದ್ರು, ಅನ್ವರ್, ಶ್ರೀನಿವಾಸ ಕೊಪ್ಪರ, ಆಂಜನೇಯ ಕುರುಬದೊಡ್ಡಿ, ಶ್ರೀನಿವಾಸ ಕಲವಲದೊಡ್ಡಿ, ಪ್ರಸಾದ್, ಸೇರಿದಂತೆ ಅನೇಕರು ಇದ್ದರು.