ಬೀದರ್ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಒತ್ತಾಯಿಸಿದೆ.
ಈ ಕುರಿತು ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼಧಾರ್ಮಿಕ, ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮಗಳ ಆಯೋಜನೆಗೆ ನಿವೇಶನ ಇಲ್ಲದ ಕಾರಣ ಹಿಂದುಳಿದ ವರ್ಗಗಳಿಗೆ ಬಹಳ ಸಮಸ್ಯೆಯಾಗುತ್ತಿದೆʼ ಎಂದು ಗಮನ ಸೆಳೆದರು.
ಜಿಲ್ಲಾ ಉಪ್ಪಾರ ಸಮಾಜದ ಗೌರವಾಧ್ಯಕ್ಷ ಜಗನ್ನಾಥ ಉಪ್ಪಾರ, ಅಧ್ಯಕ್ಷ ತಾನಾಜಿ ಸಗರ್, ಭೋವಿ ಸಮಾಜದ ಅಧ್ಯಕ್ಷ ಶೈಲೇಂದ್ರ ಹಿವಾರೆ, ಭಾವುಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಸಂಜುಕುಮಾರ ಘನಾತೆ, ಗೌಳಿ ಸಮಾಜದ ಅಧ್ಯಕ್ಷ ವಿಠ್ಠಲರಾವ್ ಗೌಳಿ, ಇಡಿಗ ಸಮಾಜದ ಬೀದರ್ ನಗರ ಘಟಕದ ಅಧ್ಯಕ್ಷ ಸಂಗಯ್ಯ ಸುಲ್ತಾನಪುರ, ಕಲಾಲ್ ಸಮಾಜದ ಅಧ್ಯಕ್ಷ ಸಾಯಿಕುಮಾರ ಖಾಟಿಕ್, ವಿವಿಧ ಸಮಾಜಗಳ ಮುಖಂಡರಾದ ಶಿವಕುಮಾರ ಶಹಾಪುರೆ, ಶಾಂತಕುಮಾರ ಮಂಗಲಗಿ, ಉಮೇಶ ಭೋವಿ, ಧನಾಜಿ ಸಗರ್ ಇದ್ದರು.