ಯಾದಗಿರಿ ಜಿಲ್ಲೆಯ ಯರಗೋಳ ಸಮೀಪದ ಕಂಚಗಾರಹಳ್ಳಿಯ ಶ್ರೀಶೈಲ ಎಂಬ ವಿದ್ಯಾರ್ಥಿ ತಂದೆ ಸಾವಿನ ದುಃಖದ ಮಧ್ಯೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ.
ಶ್ರೀಶೈಲ ಅವರ ತಂದೆ, ಅಲ್ಲಿಪುರ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ (50) ಅವರು ಮಂಗಳವಾರ (ಮಾ.25) ತಡ ರಾತ್ರಿ 11 ಗಂಟೆಗೆ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ತಂದೆಯ ಸಾವಿನ ದುಃಖದ ಮಧ್ಯೆಯೂ ಶ್ರೀಶೈಲ ಯರಗೋಳದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಮುಗಿದ ಬಳಿಕ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ.