ಯುಗಾದಿ ಮತ್ತು ರಂಜಾನ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು, ಯಾವುದೇ ಅಹಿತಕರ ಘಟನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕ ಜಿ.ಹರೀಶ ಹೇಳಿದರು.
ನಗರದ ಸದರ ಬಜಾರ ಪೋಲೀಸ್ ಠಾಣೆಯಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬ ನಿಮಿತ್ತ ಹಮ್ಮಿಕೊಂಡಿದ್ದ ಸರ್ವಧರ್ಮೀಯರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುಗಾದಿ ಮತ್ತು ರಂಜಾನ ಹಬ್ಬಗಳು ದೇಶದ ದೊಡ್ಡ ಹಾಗೂ ಮಹತ್ವದ ಹಬ್ಬಗಳಾಗಿದ್ದು, ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಈ ಎರಡು ಹಬ್ಬಗಳು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡುತ್ತಾರೆ. ಸಮಾಜದಲ್ಲಿ ಸರ್ವರಿಗೂ ಸುಖ, ಶಾಂತಿ, ಆರೋಗ್ಯ, ನೆಮ್ಮದಿಯನ್ನು ಬಯಸುವ ಈ ಹಬ್ಬಗಳನ್ನು ಯಾವುದೇ ಅಹಿತಕರ ಗಟನೆಗಳು ಜರುಗದಂತೆ ಶಾಂತಿ ಸುವ್ಯವಸ್ಥೆಯಿಂದ ಆಚರಣೆ ಮಾಡಬೇಕು ಎಂದರು.
ಈ ಸುದ್ಡಿ ಓದಿದ್ದೀರಾ? ರಾಯಚೂರು |ಮಹಿಳೆಯರ ಮೇಲೆ ಕೊಲೆ,ಅತ್ಯಾಚಾರ ಕಡಿವಾಣಕ್ಕೆ ದೆಹಲಿಗೆ ಕಾಲ್ನಡಿಗೆ ಜಾಥಾ ; ಪ್ರಧಾನಿಗೆ ಮನವಿ
ಈ ಎರಡೂ ಹಬ್ಬಗಳಿಗೆ ಪೋಲೀಸ್ ಇಲಾಖೆ ಯಿಂದ ಸೂಕ್ತ ಬಂದೋಬಸ್ತು ಒದಗಿಸಿಕೊಡಲಾಗುವುದು, ಏನಾದರೂ ಸಣ್ಣಪುಟ್ಟ ಘಟನೆಗಳು ಸಂಭವಿಸಿದಲ್ಲಿ ಮಾಹಿತಿ ನೀಡಲು ತಿಳಿಸಿದರು.
ಡಿವೈಎಸ್‌ಪಿ ಶಾಂತವೀರ ಮಾತನಾಡಿ, ದೇಶವು ಸಂಸ್ಕೃತಿ ಸಂಪ್ರದಾಯಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದು, ಪ್ರತಿಯೊಬ್ಬರೂ ಯಾವುದೇ ಹಬ್ಬಗಳನ್ನು ತಮ್ಮ ಸಂಪ್ರದಾಯದ ಪ್ರಕಾರ ಶಾಂತಿ ಸೌಹಾರ್ಧತೆ ಯೊಂದಿಗೆ ಆಚರಿಸಿ ಮತ್ತೊಬ್ಬರಿಗೆ ಮಾದರಿಯಾಗಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಹಿರಿಯ ಮುಖಂಡರಾದ ಶ್ರೀನಿವಾಸ ಪತಂಗೆ, ಅಶೋಕ ಜೈನ್, ನಜೀರ ಪಂಜಾಬಿ, ರಸೂಲ ಸಾಬ್ ಮಾತನಾಡಿದರು. ಹಬ್ಬದ ದಿನಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ವೆಸ್ಟ್ ಸಿಪಿಐ ನಾಗರಾಜ ಮೇಕಾ, ಪಿಎಸ್‌ಐಗಳಾದ ಮಂಜುನಾಥ, ಚಂದ್ರಪ್ಪ, ಅಮಿತಾ, ನರಸಮ್ಮ, ಹಾಗೂ ವಕ್ಫ್ ಬೋರ್ಡ್ ಅಧಿಕಾರಿ ಫರೀದ್ ಖಾನ್, ಸೇರಿದಂತೆ ಅನೇಕರು ಇದ್ದರು.