ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಹೂವಿನಹಡಗಲಿ ಮೂಲದ ಕೆಲಸದ ಮಹಿಳೆಯನ್ನು ಮೀನು ಕದ್ದಿದ್ದಾರೆ ಎನ್ನುವ ನೆಪವೊಡ್ಡಿ ಮರಕ್ಕೆ ಕಟ್ಟಿ ಥಳಿಸಿರುವುದನ್ನು ಖಂಡಿಸಿ ಎನ್ ಎಫ್ ಐ ಡಬ್ಲ್ಯೂ ಮಹಿಳಾ ಒಕ್ಕೂಟ ದಾವಣಗೆರೆ ಘಟಕದ ವತಿಯಿಂದ ರಾಜ್ಯದ ಗೃಹ ಮಂತ್ರಿಗಳಿಗೆ ದಾವಣಗೆರೆ ಉಪ ವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದವರನ್ನು ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಲಾಯಿತು.

ದಾವಣಗೆರೆ ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ಮಹಿಳಾ ಒಕ್ಕೂಟದ ಕಾರ್ಯಕರ್ತರು, ಮೀನು ಕದ್ದ ನೆಪವೊಡ್ಡಿ ಮಹಿಳೆಗೆ ಮರಕ್ಕೆ ಕಟ್ಟಿ ಹತ್ತಾರು ಜನ ಸುತ್ತುವರಿದು ಮಹಿಳೆ ಎನ್ನುವ ಸೌಜನ್ಯವಿಲ್ಲದೇ ಹಲ್ಲೆ ಮಾಡಲಾಗಿದೆ.
ಮಹಿಳೆಗೆ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಂಡು ಮಾನವೀಯತೆ ಮರೆತಿದ್ದಾರೆ. ಹಲ್ಲೆ ನಡೆಸಿದ ಅನಾಗರೀಕರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಈ ತರಹದ ಘಟನೆಗಳು ರಾಜ್ಯದಲ್ಲಿ ಮುಂದೆ ನಡೆಯದಂತೆ ಸರ್ಕಾರ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾತಿ ತಾರತಮ್ಯ, ಎಸ್ಡಿಎಂಸಿ ಅಧ್ಯಕ್ಷನಿಂದ ಮುಖ್ಯ ಶಿಕ್ಷಕನ ವಿರುದ್ಧ ದೂರು, ಕ್ರಮಕ್ಕೆ ಆಗ್ರಹ.
ಪ್ರತಿಭಟನೆಯಲ್ಲಿ ಎನ್ ಎಫ್ ಐ ಡಬ್ಲ್ಯೂ ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ಸದಸ್ಯೆ ಸರೋಜಾ, ಗೀತಾ, ಅನ್ನಪೂರ್ಣ, ಕುಸುಮ, ಶಕುಂತಲಮ್ಮ, ಮಲ್ಲಮ್ಮ, ಮಮತಾ, ಪದ್ಮಾವತಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.