ಈದ್ ಹಬ್ಬದ ಹಿನ್ನೆಲೆ ಶಾಪಿಂಗ್ ಮುಗಿಸಿ ಮನೆಗೆ ಮರುಳುತ್ತಿದ್ದ ಮುಸ್ಲಿಂ ಬಾಲಕನ ಮೇಲೆ ಪೊಲೀಸ್ ಅಧಿಕಾರಿಗಳು ಕ್ರೂರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಉತ್ತರಖಂಡದ ರುದ್ರಪುರದಲ್ಲಿ ನಡೆದಿದೆ. ಮಂಗಳವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
14 ವರ್ಷದ ಬಾಲಕ ಆರಿಶ್ ಎಂಬಾತನ ಮೇಲೆ ರಾದ್ರಪುರದ ರಾಮ್‌ಪುರ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ರಂಜಾನ್ ಉಪವಾಸ ಮಾಡುತ್ತಿದ್ದ ಆರಿಶ್ ಅವರು ಈದ್‌ಗಾಗಿ ಶಾಪಿಂಗ್ ಮಾಡಲು ತೆರಳಿದ್ದರು. ಮನೆಗೆ ಮರಳುವಾಗ ಆತನನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ, ಪೊಲೀಸರು ಮದ್ಯಪಾನ ಮಾಡಿದ್ದರು ಮತ್ತು ನಾಗರಿಕ ಉಡುಪಿನಲ್ಲಿದ್ದರು ಎಂದು ಹೇಳಲಾಗಿದೆ.
ಪಾನಮತ್ತರಾಗಿದ್ದ ಪೊಲೀಸರು ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಆತನಿಗೆ ಕೈಕೋಳ ಹಾಕಿ ಕೂರಿಸಿಕೊಂಡು ದೌರ್ಜನ್ಯ ಎಸಗಿದ್ದಾರೆ. ಆತನ ಪೋಷಕರು ಸ್ಥಳಕ್ಕೆ ಬಂದಾಗ, ಆರಿಶ್‌ನನ್ನು ಜೈಲಿಗೆ ಕೊರೆದೊಯ್ಯುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಆರಿಶ್ ತಂದೆ ಅತಿಕ್ ಅವರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಯಾವುದೇ ಕಾರಣವಿಲ್ಲದೆ ಪೊಲೀಸರು ತನ್ನ ಮಗನನ್ನು ವಶಕ್ಕೆ ಪಡೆದು, ಹಿಂಸಿಸುತ್ತಿದ್ದಾರೆ. ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
In #Uttarakhand's #UdhamSinghNagar, police personnel assaulted a minor #Muslim boy on March 25 as he was returning home on a motorbike after shopping for #Eid clothes in #Rudrapur.
— Hate Detector 🔍 (@HateDetectors) March 27, 2025
The victim alleged that the intoxicated officers attacked him, handcuffed him, and took him to the… pic.twitter.com/Rk1nj8P5P4
ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತ ಬಾಲಕ ಆರಿಶ್, “ನಾನು ನನ್ನ ಬೈಕ್‌ನಲ್ಲಿ ಈದ್ ಶಾಪಿಂಗ್ ಮುಗಿಸಿ ಹಿಂತಿರುಗುತ್ತಿದೆ. ಈ ವೇಳೆ, ಪೊಲೀಸರು ನನ್ನನ್ನು ತಡೆದು, ನನ್ನ ಬೈಕ್‌ನ ಕೀಲಿಯಲ್ಲಿ ಕಸಿಕೊಂಡರು. ನನ್ನನ್ನು ಪೊಲೀಸ್ ಔಟ್‌ಪೋಸ್ಟ್‌ಗೆ ಕರೆದೊಯ್ದರು. ಅಲ್ಲಿ ಹಲ್ಲೆ ನಡೆಸಿದರುನಾನು ಧರಿಸಿದ್ದ ಟೋಪಿ ನೋಡಿದ ಬಳಿಕ, ಅವರು ನನಗೆ ಬೆಲ್ಟ್‌ನಿಂದ ಹೊಡೆದರು. ನಾನು ಉಪವಾಸ ಮಾಡುತ್ತಿದ್ದೇನೆ. ಹೊಡೆಯಬೇಡಿ ಎಂದು ಕೇಳಿಕೊಂಡಾಗ, ಇನ್ನೂ ಹೆಚ್ಚು ಹಲ್ಲೆ ಮಾಡಿದರು” ಎಂದು ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಭಾರತ ‘ಮುಸ್ಲಿಂ ರಾಷ್ಟ್ರ’ವಾಗಲು ಸಾಧ್ಯವೇ? ಅಸಲಿ ಸಂಗತಿಗಳೇನು?
ಪೊಲೀಸರ ಹಲ್ಲೆಯಿಂದ ಆರಿಶ್ ದೇಹದ ಮೇಲೆ ತೀವ್ರವಾದ ಗಾಯಗಳಾಗಿವೆ. ಗಾಯಗಳ ಚಿತ್ರಗಳನ್ನು ಆರಿಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆರೋಪಿ ಪೊಲೀಸ್ ಅಧಿಕಾರಿಗಳನ್ನು ವಿಜಯ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ.
ಘಟನೆಯನ್ನು ಕಾಂಗ್ರೆಸ್ ನಾಯಕರಾದ ಮೋಹನ್ ಖೇಡಾ ಮತ್ತು ಸಂಜಯ್ ಅನುಜಾ ಅವರು ಖಂಡಿಸಿದ್ದಾರೆ. ಕೊತ್ವಾಲಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣದ ಬಗ್ಗೆ ವಿಚಾರಿಸಿದ್ದಾರೆ. ತ್ವರಿತ ತನಿಖೆಗೆ ಒತ್ತಾಯಿಸಿದ್ದಾರೆ.
ಅಪ್ರಾಪ್ತ ಬಾಲಕನ ಮೇಲಿನ ಹಲ್ಲೆ ಕುರಿತು ದೂರು ಬಂದರೆ ತನಿಖೆ ಆರಂಭಿಸಲಾಗುವುದು ಎಂದು ರುದ್ರಪುರ ಸಿಒ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಉತ್ತರಖಂಡದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರಂತೆಯೇ ವರ್ತಿಸುತ್ತಾರೆ. ಕೋಮುದ್ವೇಷವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ. ಅಂತಹ ಆರೋಪಗಳಿಗೆ ರುದ್ರಪುರದ ಘಟನೆ ಮತ್ತಷ್ಟು ಪುಷ್ಟಿ ನೀಡುತ್ತದೆ.
ಈ ಚೆಲಾಳ ಮನಸ್ತಿತಿ ಯಾವ ರಿತಿಯಾಗಿದೆ ಎಂದರೆ ಅಧೀಕಾರದ ಮೂಲಕ್ ಸಮಾಜ ವನ್ನ ವಡೆಯುತ್ತಿದಾರೆ ಇವರ ಮೇಲೆ ಕಾರ್ಯಾಚಣೆ ಯಾಗಬೇಕೆಂದು ಸರ್ಕಾರಕ್ಕೆ ಮನವಿ
ಈಕಡೆಯಿಂಡ ರಂಜಾನ್ ಹಬ್ಬದ ಕಿಟ್ ಕೊಡುವದು
ಅಕಡೆಯಿಂದ ಉಪವಾಸ ವಿದ್ದವರ್ ಮೇಲೆ ಹಲೇ ಮಾಡುವದು