ಯತ್ನಾಳ್ ಎಂಬ ಹಿಂದೂ ಹುಲಿಯನ್ನು ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು ಬೋನಿನಲ್ಲಿ ಹಾಕಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವ ಎಲ್ಲರನ್ನೂ ರಾಜಕೀಯವಾಗಿ ಬಿಜೆಪಿ ಮುಗಿಸುತ್ತದೆ. ಮುಂದಿನ ಟಾರ್ಗೆಟ್ ಸಿ ಟಿ ರವಿ ಆಗಿರಲಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲ್ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, “ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದ ಅನಂತ್ ಕುಮಾರ್ ಹೆಗ್ಡೆ, ಈಶ್ವರಪ್ಪ ಹಾಗೂ ಪ್ರತಾಪ್ ಸಿಂಹ ಅವರನ್ನ ಮುಗ್ಸಿದ್ದಾರೆ. ಈಗ ಯತ್ನಾಳ್‌ರನ್ನು ಮುಗ್ಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಬೈದಿರುವವರಲ್ಲಿ ಯತ್ನಾಳ್ ಒಬ್ಬರು. ಹಾಗೆ ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನೂ ಬೈದಿದ್ದಾರೆ. ಹಿಂದುತ್ವದ ಬಗ್ಗೆ ಹೆಚ್ಚು ಮಾತನಾಡುವ ಬಿಜೆಪಿಯ ಬಹತೇಕರನ್ನ ಬಿಜೆಪಿ ರಾಜಕೀಯವಾಗಿ ಮುಗಿಸಿದೆ. ಮುಂದಿನ ಸರದಿ ಸಿಟಿ ರವಿಯವರದ್ದು” ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪನವರು ಟಿಕೆಟ್ ಕೇಳಿದ್ದೇ ತಪ್ಪಾ? ಇಡೀ ಜಿಲ್ಲೆಯಲ್ಲಿ ಹಿಂದುತ್ವ ಪ್ರತಿಪಾದನೆ ಮಾಡುತ್ತಿದ್ದ ಈಶ್ವರಪ್ಪನವರನ್ನೇ ಹೊರಹಾಕಿದ ಮೇಲೆ ಯತ್ನಾಳರನ್ನ ಬಿಡುತ್ತಾರಾ?. ರೇಣುಕಾಚಾರ್ಯ ನಮ್ಮನ್ನೆಲ್ಲ ಹೈದರಾಬಾದ್‌ಗೆ ಕರೆದುಕೊಂಡು ಹೋದಾಗ ಅಪ್ಪ ಮಕ್ಕಳ ಚಡ್ಡಿ ಬಿಚ್ಚುತ್ತೇನೆ ಎಂದಿದ್ದ. ಅಂದು ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಬೈದಿದ್ದ ರೇಣುಕಾಚಾರ್ಯ ಇಂದು ಬಿಎಸ್‍ವೈ ಮಾನಸ ಪುತ್ರರಾಗಿದ್ದಾರೆ. ಯತ್ನಾಳ್‌ಗೆ ಪಂಚಮಸಾಲಿ ಸಮಾಜವಿದೆ. ಅವರ ಪರವಾಗಿ ಹೋರಾಟ ಮಾಡುವುದಾಗಿ ಪಂಚಮಸಾಲಿ ಗುರುಗಳು ಹೇಳಿಕೆ ಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ.
“18 ಶಾಸಕರನ್ನು ಅಮಾನತು ಮಾಡಿದ್ದಕ್ಕೆ ದೊಡ್ಡ ವಿಷಯ ಮಾಡಿದಿರಿ.. ಈಗ ಯತ್ನಾಳ್‌ರನ್ನು ಹೊರ ಹಾಕಿದ್ದಾರಲ್ಲ ಇದಕ್ಕೆ ಏನು ಹೇಳೋದು. ಯೋಗಿ ಆದಿತ್ಯನಾಥ ರಂತಹವರನ್ನು ಕೂಡ ಇವರು ತೆಗೆಯುತ್ತಾರೆ. ರಾಹುಲ್ ಗಾಂಧಿಯನ್ನು ಹೊಗಳಿದ್ದು ನೋಡಿದರೆ ಯೋಗಿ ಆದಿತ್ಯನಾಥ ರವರನ್ನು ಬಿಜೆಪಿ ಹೊರಹಾಕುವ ಸಾಧ್ಯತೆಯಿದೆ. ಬಿವೈ ವಿಜಯೇಂದ್ರ ಗೆದ್ದಂತೆ ಅಲ್ಲ ಅವರಿಗೆ ಪವರ್ ಇದೆ. ಯಡಿಯೂರಪ್ಪ ಮತ್ತು ಅವರ ಮಕ್ಕಳ ಬಳಿ 3.500 ಕೋಟಿ ಹಡಬೆ ದುಡ್ಡು ಇದೆ ಎಂದಿದ್ದಾರೆ. ಯತ್ನಾಳ್ ರವರ ಎಂಎಲ್ಎ ಗಿರಿ ಹಾಗೆ ಇರುತ್ತದೆ. ಯತ್ನಾಳ್ ರವರು ಹಿಂದೂ ಕಟ್ಟಾಳು ಕಾಂಗ್ರೆಸ್ ಪಕ್ಷವನ್ನು ಬೈದಿದ್ದರಿಂದ ಕಾಂಗ್ರೆಸ್‌ಗೆ ಸೇರ್ಪಡೆ ಸಾಧ್ಯವಿಲ್ಲ. ಯಡಿಯೂರಪ್ಪ ಮತ್ತು ಅವರ ಮಕ್ಕಳು ನನ್ನನ್ನು ಮುಗಿಸಲಿಕ್ಕೆ ಹೊರಟಿದ್ರು, ಯಾರನ್ನು ಮುಗಿಸಲು ಸಾಧ್ಯವಿಲ್ಲ ಒಂದಲ್ಲ ಒಂದು ದಿವಸ ಇವರು ಹೊರಗೆ ಹೋಗೆ ಹೋಗುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಹೊಸನಗರ ಮನೆಗಳ್ಳನ ಬಂಧನ
ಕಾಂಗ್ರೆಸ್ ಪಕ್ಷದಲ್ಲೂ ಕೂಡ ಗೊಂದಲವಿದೆ. ಕಾಂಗ್ರೆಸ್ ಹೈಕಮಾಂಡ್ ನಮ್ಮಲ್ಲಿರೋ ಗೊಂದಲವನ್ನು ಹೋಗಲಾಡಿಸಬೇಕು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವುದಾಗಿ ಹೇಳಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ವಿಷಯದಲ್ಲಿ ಬಿಜೆಪಿ ಹೋರಾಟ ಸರಿಯಲ್ಲ. 35 ಲಕ್ಷ ಬಡ ಕುಟುಂಬಗಳಿಗೆ ಆಹಾರ ಕಿಟ್ ಕೊಡುವುದಾಗಿ ಮೋದಿಜಿ ಅನೌನ್ಸ್ ಮಾಡಿದ್ದಾರಲ್ಲ. ಇದಕ್ಕೆ ಬಹಿಷ್ಕಾರ ಹಾಕತ್ತೀರಾ? ಸ್ಟ್ರೈಕ್ ಮಾಡುತ್ತೀರಾ? ನಾಚಿಕೆ ಆಗಬೇಕು ಬಿಜೆಪಿಗೆ. ಮುಸ್ಲಿಮರಿಗೆ ನಾವು ಕೊಟ್ಟಿರೋದಕ್ಕೆ ಕೇವಲ ಒಂದು ಪರ್ಸೆಂಟ್ ಮಾತ್ರ ಕೊಟ್ಟಿರೋದು. ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲಾ ಧರ್ಮದ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬುದು ಮೋದಿಜಿ ಹೇಳಿದ್ದಾರಲ್ಲ ಇದು ಅವರಿಗೆ ಮರೆತು ಹೋಗಿದೆ” ಎಂದು ಬಿಜೆಪಿ ನಾಯಕರನ್ನೇ ತರಾಟೆಗೆ ತೆಗೆದುಕೊಂಡಿದ್ದರು.