ಉಡುಪಿ | ಬೀಡಿ ಕಾರ್ಮಿಕರಿಗೆ ಕಡಿಮೆ ಕೂಲಿ ನಿಗದಿ ಮಾಡಿದ ಕರ್ನಾಟಕ ಸರಕಾರ

Date:

Advertisements

ರಾಜ್ಯದಲ್ಲಿರುವ ಸರಿ ಸುಮಾರು ಆರರಿಂದ ಏಳು ಲಕ್ಷ ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರ ತೀವ್ರ ಅನ್ಯಾಯ ಮಾಡುತ್ತಿದೆ. ಈ ಹಿಂದೆ 2018 ರಲ್ಲಿ ಬೀಡಿ ಉದ್ಯಮದಲ್ಲಿನ ಕಾರ್ಮಿಕರಿಗೆ ಕನಿಷ್ಟ ವೇತನವನ್ನು ಕನಿಷ್ಟ ವೇತನ ಕಾಯಿದೆ ಕಲಂ 5/1 ಕಮಿಟಿ ಸರಕಾರ, ಬೀಡಿ ಮಾಲಕರು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು. ಸರ್ಕಾರಿ ಅಧಿಕಾರಿಗಳಿಗೆ ಇದ್ದ ತ್ರೀಪಕ್ಷೀಯ ಸಮಿತಿಯೇ ನಿರ್ಣಯಿಸಿತ್ತು ಅದನ್ನು ಸರಕಾರ ತನ್ನ ನೀತಿಯ ಭಾಗವಾಗಿ ಸೇವಾ ಹಿರಿತನವನ್ನು ಒಳಗೊಂಡು ಅಧಿಸೂಚನೆ ಹೊರಡಿಸಿತ್ತು ಬೀಡಿ ಮಾಲಕರು ಸೇವಾ ಹಿರಿತನ ಸಮಿತಿಯಲ್ಲಿ ಚರ್ಚಿಸಿಲ್ಲ. ಹಾಗಾಗಿ ತಮಗೆ ಹೋರೆಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸರ್ಕಾರದದ ಆದೇಶವನ್ಮು ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸಿತು 2018 ರಿಂದ 2024 ತನಕ 7 ವರ್ಷಗಳ ಕಾಲ ಸುಮ್ಮನೆ ಎಳೆದಾಡಿ ಬೀಡಿ ಕಾರ್ಮಿಕರಿಗೆ ಅಧಿಸೂಚಿತ ಕನಿಷ್ಟ ಕೂಲಿಯನ್ನು ಜಾರಿ ಮಾಡದೆ ಬಡ ಬೀಡಿ ಕಾರ್ಮಿಕರ ಸಂಕಷ್ಟವನ್ನು ಹೆಚ್ಚಿಸಿದ ಬೀಡಿ ಮಾಲಕರು ಏಕಾ ಏಕಿ 16.11.2024 ರಂದು ಅ ಅರ್ಜಿ ಹಿಂದಕ್ಕೆ ಪಡೆದಿದ್ದಾರೆ ಎಂದು ಅಖಿಲ ಭಾರತ ಫೆಡರೇಷನ್‌ ನ ಕೇಂದ್ರ ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೊಂದು ಕಡೆ ಸರ್ಕಾರ ಜೊತೆಯಲ್ಲಿ ವ್ಯವಹಾರ ನಡೆಸಿ ತನ್ನ ಪರವಾಗಿ ಬೀಡಿ ಕಾರ್ಮಿಕರಿಗೆ ವಿರೋಧವಾಗಿ, ಸರಕಾರ ತನ್ನದೆ ಆದೇಶವನ್ನು ಹಿಂಪಡೆದು ತುಟ್ಟಿಭತ್ಯೆಯನ್ನು ಬೆಲೆ ಏರಿಕೆ ಆಧಾರದಲ್ಲಿ ಅಂಶ ಒಂದಕ್ಕೆ ನಾಲ್ಕು ಪೈಸೆ ಇದ್ದುದ್ದನ್ನು ಮೂರು ಪೈಸೆಗೆ ಇಳಿಸಿದೆ. ಸರ್ಕಾರದ ಈ ನಡೆ ನ್ಯಾಯೋಜಿತ ಅಲ್ಲ ಎಂದು ಸರ್ಕಾರದ ಈ ನಡೆಯನ್ನು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್‌ (ಸಿಐಟಿಯು) ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಇದರ ಹಿಂದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಅನುಮಾನವನ್ನು ವ್ಯಕ್ತವಾಗುತ್ತಿದ್ದು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಸಮಗ್ರ ತನಿಖೆಗೆ ಆದೇಶಿಸುವಂತೆ ಮತ್ತು ಹಿಂದಿನ ಅಧಿಸೂಚನೆಯನ್ನು ಹಿಂಪಡೆದಿರುವ ಆದೇಶವನ್ನು ವಜಾ ಮಾಡುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

Advertisements

ಬೀಡಿ ಕಾರ್ಮಿಕರ ಕನಿಷ್ಟ ಕೂಲಿಯ ವಿಚಾರದಲ್ಲಿ ಈ ಹಿಂದಿನಿಂದಲೂ ಬೀಡಿ ಕಂಪನಿಯು ಆಡಳಿತ ಮಂಡಳಿಗಳು ಸರ್ಕಾರಿ ಆದೇಶಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಾ ಸರ್ಕಾರಕ್ಕೆ ಸವಾಲು ಒಡ್ಡುತ್ತ ಬಂದಿವೆ. ಇದನ್ನು ತಡೆದು ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಸರ್ಕಾರಗಳು ವಿಫಲವಾಗಿದೆ ಎಂದು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್‌ (ಸಿಐಟಿಯು) ಆಪಾದಿಸಿದ್ದಾರೆ.

ರಾಜ್ಯದ ಕಾರ್ಮಿಕ ಸಚಿವರಾದ ಶ್ರೀ ಸಂತೋಷ ಲಾಡ್ ಅವರು ಕನಿಷ್ಟ ವೇತನ ನಿಗಧಿ ಪಡಿಸುವಾಗ ಗೌರವಾನ್ವಿತ ಸುಪ್ರೀಂ ಕೋರ್ಟ್ ನ ಮಾರ್ಗದರ್ಶಿ ಸೂತ್ರಗಳು ಮತ್ತು ರಪ್ತಕೋಸ್ ಬೆಟ್ಟ್ ಸೂತ್ರ ಅನುಸರಿಸಲಾಗುವುದೆ ಎಂದು ವೇದಿಕೆಗಳಲ್ಲಿ ಭಾಷಣ ಮಾಡುತ್ತಿದ್ದಾರೆ ಅದರೆ ಅಗತ್ಯ ವಸ್ತುಗಳ ಬೆಲೆಗಳು ಗಗನ ಮುಟ್ಟಿದೆ. ವಿದ್ಯುತ್ ಶಕ್ತಿ ದರ, ಹಾಲಿನದರ, ಬಸ್ ಪ್ರಯಾಣದರಗಳು ಆರೋಗ್ಯ ವೆಚ್ಚ, ಔಷಧೀಗಳ ದರ, ನಿರಂತರವಾಗಿ ಹೆಚ್ಚಳವಾಗುತ್ತಿರುವಾಗ ಅತಿ ಸಂಕಷ್ಟದಲ್ಲಿ ಇರುವ ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿಯನ್ನು ಮೇಲ್ಮುಖ ಪರಿಷ್ಕರಣೆಗೆ ಒಳಪಡಿಸದೆ ಹಿಮ್ಮುಖ ವಾಗಿ ಅತ್ಯಂತ ಕನಿಷ್ಟ ಕೂಲಿ ನಿಗದಿ ಮಾಡಿರುವುದು ನಿಜಕ್ಕೂ ಖಂಡನಾರ್ಹ ಎಂದು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್‌ (ಸಿಐಟಿಯು) ಉಡುಪಿ ಅಭಿಪ್ರಾಯ ಪಟ್ಟಿದೆ ಈ ಆದೇಶವನ್ನು ಹಿಂಪಡೆದಿರುವುದನ್ನು ಸಿಐಟಿಯು ಒಪ್ಪುವುದಿಲ್ಲ ಬದಲಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಹೋರಾಟವನ್ನು ಮುಂದುವರಿಸುವುದು ಹಾಗೂ ಉಡುಪಿ ಜಿಲ್ಲೆಯ ಹಾಗೂ ದ.ಕ ಜಿಲ್ಲೆಯ ಅದರ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸರಕಾರದ ವಿರುದ್ಧ ಸರಕಾರದ ಆದೇಶ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X