ಮೈಸೂರಿನ ಡಿ ದೇವರಾಜ ಅರಸು ರಸ್ತೆಯಲ್ಲಿ ಕರ್ನಾಟಕ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಲು ಮತ್ತು ಮೊಸರು ದರವನ್ನು ಕಾಂಗ್ರೆಸ್ ಸರ್ಕಾರ ಮೂರು ಬಾರಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಹಾಲು ಮೊಸರನ್ನು ತಲೆ ಮೇಲೆ ಹೊತ್ತು ಅಣಕು ಪ್ರದರ್ಶನ ಮಾಡಿದರು.
ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ ” ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಬರೆ ಎಳೆಯುತ್ತಿರುವುದು, ವೆಚ್ಚ ಹೆಚ್ಚುವಂತೆ ಮಾಡುತ್ತಿರುವುದು ಖಂಡನಿಯ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಹಾಲಿನ ದರ ಹೆಚ್ಚಳ ಮಾಡಿದ್ದಾರೆ, ಒಂದು ವರ್ಷದಲ್ಲಿ ಎರಡು ಬಾರಿ ವಿದ್ಯುತ್ ಹೆಚ್ಚಳ ಮಾಡಿದ್ದಾರೆ, ದಿನೇ ದಿನೇ ದಿನನಿತ್ಯ ವಸ್ತುಗಳು ಗಗನಕ್ಕೇರುತ್ತಿರುವುದು ಸರಿಯಲ್ಲ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬಹಳ ತೊಂದರೆಯಾಗುತ್ತಿದ್ದು ಸರ್ಕಾರ ಗಮನ ಹರಿಸಿ ಏರಿಕೆಯನ್ನು ಕೈಬಿಡಬೇಕೆಂದು ” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ನಾಲ್ವರ ಬರ್ಬರ ಹತ್ಯೆ; ಆರೋಪಿ ಪರಾರಿ
ಮಂಜುನಾಥ್ , ಎಸ್ ಎನ್ ರಾಜೇಶ್, ರವಿ, ಪ್ರಮೋದ್, ನಿತಿನ್, ಯತೀಶ್ ,ಬಾಬು, ಕಣ್ಣನ್ ,ಚಂದ್ರು, ಸಂತೋಷ್ , ರವಿ, ಉಮೇಶ್ , ಈಶ್ವರ, ಬೆಳಕು ಮಂಜು ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಇದ್ದರು.