ರಮ್ಜಾನ್‌ ಮಾಸದಲ್ಲಿ ಮದರಸಾಗಳನ್ನು ಮುಚ್ಚಿಸುತ್ತಿರುವ ಬಿಜೆಪಿ ಸರ್ಕಾರ

Date:

Advertisements

ಪವಿತ್ರ ರಮ್ಝಾನ್ ಮಾಸದಲ್ಲಿ ಉತ್ತರಾಖಂಡದ ಬಿಜೆಪಿ ಸರ್ಕಾರ ಹಲವಾರು ಅಕ್ರಮಗಳ ನೆಪವೊಡ್ಡಿ ರಾಜ್ಯಾದ್ಯಂತ 136 ಮದರಸಾಗಳಿಗೆ ಬೀಗ ಹಾಕಿದೆ. ಈ ಕ್ರಮವನ್ನು ‘ಮುಸ್ಲಿಮ್ ಧರ್ಮ ವಿರೋಧಿ’ ಎಂದು ಇಸ್ಲಾಮ್ ಧರ್ಮಗುರುಗಳು ಖಂಡಿಸಿದ್ದಾರೆ. ಮದರಸಾ ಮಂಡಳಿಯಿಂದ ಅನುಮತಿ ಪಡೆದಿಲ್ಲವೆಂದು ಹರಿದ್ವಾರದ ಎರಡು ಮದರಸಾಗಳಿಗೆ ಬೀಗಮುದ್ರೆ ಹಾಕಲಾಗಿದೆ. ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲವೆಂದು ಡೆಹರಾದೂನ್ ನ ಮದರಸಾವೊಂದರ ಮೊದಲ ಅಂತಸ್ತನ್ನು ಮುಚ್ಚಲಾಗಿದೆ. ಮೊದಲ ಅಂತಸ್ತು ಮಾತ್ರವಲ್ಲ, ಇಡೀ ಮದರಾಸವನ್ನು ಮುಚ್ಚುವ ಉದ್ದೇಶದಿಂದ ಬಂದಿದ್ದರು ಅಧಿಕಾರಿಗಳು. ಆದರೆ ನಾವು ಪ್ರತಿಭಟಿಸಿದೆವು. ಮದರಸಾದ ನಿವೇಶನ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ತೋರಿಸಿದೆವು. ಅಂತಿಮವಾಗಿ ಮೊದಲ ಅಂತಸ್ತಿಗೆ ಮಾತ್ರವೇ ಬೀಗಮುದ್ರೆ ಹಾಕಿದರು ಎಂದ ಮದರಸಾ ಸದಸ್ಯರೊಬ್ಬರು ತಿಳಿಸಿದ್ದಾರೆ.

ಈ ಕಟ್ಟಡ 1972ರಿಂದ ಇಲ್ಲಿದೆ. ಎಂಟನೆಯ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇಷ್ಟು ಕಾಲ ಈ ಅಧಿಕಾರಿಗಳು ಯಾಕೆ ಬಂದಿರಲಿಲ್ಲ ಎಂಬುದು ಅವರ ಪ್ರಶ್ನೆಯಾಗಿತ್ತು. ಹಲ್ದ್ವಾನಿ, ನೈನಿತಾಲ್ ನ ಮೂರು ಮದರಸಾಗಳನ್ನು ಕಳೆದ ಸೋಮವಾರ ಮುಚ್ಚಿಸಲಾಗಿದೆ. ಈ ಮದರಸಾಗಳು ಕೂಡ ಮದರಸಾ ಮಂಡಳಿಯ ಮಾನ್ಯತೆ ಪಡೆದಿರಲಿಲ್ಲವೆಂಬ ಕಾರಣ ನೀಡಲಾಗಿದೆ.
ಮದರಸಾಗಳ ಮೇಲಿನ ಈ ದಾಳಿಯ ಉಸ್ತುವಾರಿಯನ್ನು ಖುದ್ದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೇ ವಹಿಸಿದ್ದಾರೆ. ‘ಅಕ್ರಮ ಹಣದಿಂದ ಅಕ್ರಮ ಕಟ್ಟಡಗಳಲ್ಲಿ ನಡೆಯುವ ಯಾವುದೇ ಸಂಸ್ಥೆಗಳಿಗೆ ಉತ್ತರಾಖಂಡದಲ್ಲಿ ಅವಕಾಶವಿಲ್ಲ. ರಾಜ್ಯದಲ್ಲಿ 500 ಅಕ್ರಮ ಮದರಸಾಗಳಿವೆ’ ಎಂಬುದು ಅವರ ಹೇಳಿಕೆ.

‘ನಮ್ಮ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರದ ಕಾನೂನುಬಾಹಿರ ಕ್ರಮದ ವಿರುದ್ಧ ಸುಪ್ರೀಮ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದೇವೆ’ ಎಂದು ಜಮಾಯತ್ ಉಲೇಮಾ ಹಿಂದ್ ನ ಪ್ರಧಾನಕಾರ್ಯದರ್ಶಿ ಮತ್ತು ಇಸ್ಲಾಮಿಕ್ ವಿದ್ವಾಂಸರೂ ಆದ ಅಬ್ದುಲ್ ರಝಾಕ್ ಹೇಳಿದ್ದಾರೆ.
‘ಉತ್ತರಪ್ರದೇಶದಲ್ಲಿಯೂ ಹಲವು ಮದರಸಾಗಳಿಗೆ ಸರ್ಕಾರ ನೋಟಿಸುಗಳನ್ನು ನೀಡಿದೆ. ಸುಪ್ರೀಮ್ ಕೋರ್ಟಿಗೆ ಅರ್ಜಿ ಹಾಕಿ ತಡೆಯಾಜ್ಞೆ ತಂದಿದ್ದೆವು. ಉತ್ತರಾಖಂಡದ ಕ್ರಮಕ್ಕೂ ತಡೆಯಾಜ್ಞೆ ತರಲಿದ್ದೇವೆ. ಸರ್ಕಾರ ನಮ್ಮ ಶಿಕ್ಷಣ ಕೇಂದ್ರಗಳು ಮತ್ತು ಧಾರ್ಮಿಕ ಕೇಂದ್ರಗಳ ವಿರುದ್ಧ ಯಾವುದೇ ಪುರಾವೆಯಿಲ್ಲದೆ ಪಿತೂರಿ ನಡೆಸಿದೆ. ವಕ್ಫ್ ಮಂಡಳಿಯಲ್ಲಿ ನೋಂದಣಿ ಮಾಡಿದ ಯಾವುದೇ ಸರ್ಕಾರಿ ಸಂಸ್ಥೆಯಲ್ಲಿ ಮದರಸಾವನ್ನು ನೋಂದಣಿ ಮಾಡಿಕೊಳ್ಳಬಹುದಾದ ಅವಕಾಶವಿದೆ’ ಎಂದಿದ್ದಾರೆ.

‘ಮದರಸಾಗಳಿಗೆ ಎಲ್ಲಿಂದ ಹಣ ಬರುತ್ತದೆಂಬ ಎಲ್ಲ ಮಾಹಿತಿಯೂ ಸರ್ಕಾರದ ಬಳಿ ಇದೆ. ಎಲ್ಲ ಹಣವೂ ಸರ್ಕಾರಿ ಅನುಮೋದನೆಯೊಂದಿಗೆ ಕಾಯಿದೆ ಕಾನೂನು ಪ್ರಕಾರವೇ ಬರುತ್ತಿದೆ. ಆದರೆ ಬಿಜೆಪಿ ಸರ್ಕಾರ ನಮ್ಮ ವಿರುದ್ಧ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಮುಂದಾಗಿದೆ’ ಎಂದು ಅವರು ದೂರಿದ್ದಾರೆ. ಯಾವುದೇ ನೋಟಿಸು ನೀಡದೆ ಮದರಾಸಗಳ ಮೇಲೆ ಕ್ರಮ ಜರುಗಿಸಲಾಗುತ್ತಿದೆ. ಪವಿತ್ರ ರಮ್ಝಾನ್ ಮಾಸದಲ್ಲಿ ನಮ್ಮನ್ನು ನೋಯಿಸುವ ಕ್ರಮವಿದು ಎಂದು ಮುಸ್ಲಿಮ್ ಸೇವಾ ಸಂಘಟನೆಯ ಅಧ್ಯಕ್ಷ ನಯೀಂ ಖುರೇಶಿ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X