ವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ ಸಾವನ್ನಪ್ಪಿರುವ ಘಟನೆ ರಾಯಚೂರಿನ ಲಿಂಗಸೂಗೂರು ತಾಲೂಕು ಮುದಗಲ್ ಪಟ್ಟಣ ವ್ಯಾಪ್ತಿಯ ಬನ್ನಿಗೋಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಗ್ರಾಮದ ಪರಪ್ಪ ಕುಂಬಾರ ಅವರ ಎರಡು ಎಮ್ಮೆಗಳು ಹಾಗೂ ಶರಣಪ್ಪ ಜಂಗ್ಲಿಯವರ ಒಂದು ಎಮ್ಮೆ ಸಾವನ್ನಪ್ಪಿವೆ ಎಂದು ಹೇಳಲಾಗಿದೆ.
ಉಳಿಮಹೇಶ್ವರ ಗ್ರಾಮಕ್ಕೆ ವಿದ್ಯುತ್ ಸಂಪರ್ಕಿಸುವ ಹಿನ್ನಲೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಬದಿಯಲ್ಲಿ ವಿದ್ಯುತ್ ತಂತಿಗಳನ್ನು ಹಾಕಲಾಗಿತ್ತು. ಇದರಿಂದಲೇ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಜೆಸ್ಕಾಂ ಇಲಾಖೆ ನಿರ್ಲಕ್ಷ್ಯಕ್ಕೆ ಎಮ್ಮೆಗಳು ಬಲಿಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೊಂದ ರೈತರ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಯಚೂರು | ಟ್ರಾಕ್ಟರ್ ಟ್ರಕಿಗೆ ಬೈಕ್ ಡಿಕ್ಕಿ; ಸವಾರ ಸಾವು
ಘಟನಾ ಸ್ಥಳಕ್ಕೆ ಮುದಗಲ್ ಪಶು ವೈದ್ಯಾಧಿಕಾರಿ ಡಾ.ಖಾಸಿಂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.