ನಿರುದ್ಯೋಗಿ ಯುವಕರಿಗೆ ‘ಆಕಾಂಕ್ಷಿ ಯುವಕರು’ (ಆಕಾಂಶಿ ಯುವ) ಎಂದು ಮಧ್ಯಪ್ರದೇಶ ಸರ್ಕಾರವು ಹಣೆಪಟ್ಟಿ ನೀಡಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಇದನ್ನು ಟೀಕಿಸಿದೆ. “ಇದು ನಿರುದ್ಯೋಗಿಗಳನ್ನು ಅಣಕಿಸಿದಂತಿದೆ” ಎಂದು ಆರೋಪಿಸಿದೆ.
ರಾಜ್ಯದ ರೋಜ್‌ಗರ್ ಪೋರ್ಟಲ್‌ನಲ್ಲಿ ಮಧ್ಯಪ್ರದೇಶದಲ್ಲಿರುವ ನಿರುದ್ಯೋಗಿ ಯುವಕರ ಸಂಖ್ಯೆಯನ್ನು ಪಟ್ಟಿ ಮಾಡಲಾಗಿದೆ. ಆದರೆ ನಿರುದ್ಯೋಗಿಗಳು ಎಂದು ಉಲ್ಲೇಖಿಸುವ ಬದಲಾಗಿ ‘ಆಕಾಂಶಿ ಯುವ’ (ಉದ್ಯೋಗ ಆಕಾಂಕ್ಷೆ ಹೊಂದಿರುವ ಯುವಕರು) ಎಂದು ಬರೆಯಲಾಗಿದೆ. 29.37 ಲಕ್ಷಕ್ಕೂ ಹೆಚ್ಚು ಮಂದಿ ಮಧ್ಯಪ್ರದೇಶದಲ್ಲಿ ನಿರುದ್ಯೋಗಿಗಳಾಗಿದ್ದಾರೆ.
ಇದನ್ನು ಓದಿದ್ದೀರಾ? ಯುವನಿಧಿ | ಕನಿಷ್ಠ 5 ವರ್ಷಗಳ ನಿರುದ್ಯೋಗಿಗಳಿಗೂ ಯೋಜನೆ ಅನ್ವಯಿಸಲು ಒತ್ತಾಯ
ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ರಾಜ್ಯ ಸಚಿವ ಗೌತಮ್ ಟೆಂಟ್ವಾಲ್ ಅವರು ಶನಿವಾರ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, “ಆಕಾಂಕ್ಷಿ ಯುವಕರು ಅಂದರೆ ಸರ್ಕಾರಿ ಅಥವಾ ಸರ್ಕಾರೇತರ ಉದ್ಯೋಗಗಳಲ್ಲಿ ಉನ್ನತ ಹುದ್ದೆ ಪಡೆಯಲು ಬಯಸುವ ಬಯಸುವ ಯುವಕರು, ಉದ್ಯೋಗದ ಹುಡುಕಾಟದಲ್ಲಿರುವ ಯುವಕರು ಉದ್ಯೋಗ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು” ಎಂದು ಹೇಳಿದರು.
ಇನ್ನು ಮಧ್ಯಪ್ರದೇಶ ಸರ್ಕಾರದ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ, “ಮಧ್ಯಪ್ರದೇಶ ಮತ್ತು ದೇಶದಲ್ಲಿ ಉದ್ಯೋಗ ಒದಗಿಸುವುದು ಅಂದರೆ ಸ್ವಯಂ ಉದ್ಯೋಗವನ್ನು ಒದಗಿಸುವುದು ಬಿಜೆಪಿ ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ರಾಜ್ಯ ಸರ್ಕಾರ ಬೃಹತ್ ಜಾಗತಿಕ ಹೂಡಿಕೆದಾರರ ಸಭೆ ಆಯೋಜಿಸಿದೆ. ಈ ಮೂಲಕ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಅವಕಾಶ ಸೃಷ್ಟಿಸಲಾಗುತ್ತದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ನೀಡಲು ಎಐಡಿವೈಓ ಆಗ್ರಹ
ನಿರುದ್ಯೋಗಿಗಳನ್ನು ಆಕಾಂಕ್ಷಿ ಯುವಕರು ಎಂದು ಉಲ್ಲೇಖಿಸಿರುವುದಕ್ಕೆ ಮಧ್ಯಪ್ರದೇಶ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಯುವಕರನ್ನು ಸರ್ಕಾರ ಅಣಕಿಸುತ್ತಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಧ್ಯಪ್ರದೇಶ ವಿಧಾನಸಭೆಯ ವಿಪಕ್ಷ ನಾಯಕ ಉಮಾಂಗ್ ಸಿಂಘರ್, “ಅರ್ಹತೆಗಳಿದ್ದರೂ ಕೆಲಸವಿಲ್ಲದ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗುತ್ತಾರೆ. ಮಧ್ಯಪ್ರದೇಶ ಸರ್ಕಾರ ಅನೇಕ ಬಾರಿ ಭರವಸೆ ನೀಡಿದರೂ ಉದ್ಯೋಗ ಒದಗಿಸಲು ಸಾಧ್ಯವಾಗದ ಕಾರಣ ಈಗ ‘ಆಕಾಂಕ್ಷಿ ಯುವಕರು’ ಎಂಬ ಹೊಸ ಪದವನ್ನು ಸೃಷ್ಟಿಸುವ ಮೂಲಕ ಅಸಹಾಯಕತೆಯನ್ನು ಅಣಕಿಸಿದೆ” ಎಂದು ದೂರಿದ್ದಾರೆ.
सरकार ने बेरोजगारों का नाम बदलकर मजाक बना दिया !!!
— Umang Singhar (@UmangSinghar) March 29, 2025
जिन शिक्षित युवाओं के पास योग्यता होते हुए भी काम नहीं है, वे 'बेरोजगार' हैं!
लेकिन, #MP_सरकार ढेरों आश्वासन के बावजूद उन्हें रोजगार नहीं दे पा रही और उनकी मजबूरी का नाम बदलकर उसे मजाक बना दिया!
कोई #मोहन_सरकार से पूछे कि… pic.twitter.com/COhe1FHKwc
“ನಿರುದ್ಯೋಗಿಗಳನ್ನು ಆಕಾಂಕ್ಷಿ ಯುವಕರು ಎಂದು ಕರೆದು ಮೋಹನ್ ಯಾದವ್ ಅವರ ಸರ್ಕಾರ ಏನು ಸಾಬೀತುಪಡಿಸಲು ಬಯಸುತ್ತಿದೆ ಎಂದು ಯಾರಾದರೂ ಪ್ರಶ್ನಿಸಬೇಕು” ಎಂದು ಕೂಡಾ ಹೇಳಿದ್ದಾರೆ.
“ಸಬ್ ಇನ್‌ಸ್ಪೆಕ್ಟರ್, ಸುಬೇದಾರ್, ಲೆಕ್ಕಪರಿಶೋಧಕರು, ಸಬ್-ಆಡಿಟರ್‌ಗಳ ನೇಮಕಾತಿಗಳು ಎಂಟು ವರ್ಷಗಳಿಂದ ಬಾಕಿ ಉಳಿದಿವೆ. ರಾಜ್ಯ ಸರ್ಕಾರ ತನ್ನ ನ್ಯೂನತೆಯನ್ನು ಮರೆಮಾಚಲು ನಿರುದ್ಯೋಗಿ ಯುವಕರ ಜೀವನದ ಜೊತೆ ಆಟವಾಡುತ್ತಿದೆ” ಎಂದು ಸಿಂಘರ್ ಆರೋಪಿಸಿದ್ದಾರೆ.
