ಮಾರ್ಚ್ 29ರ ಶನಿವಾರದಂದು ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಭಾನುವಾರ(ಮಾ.30)ದಂದು ಆಚರಿಸಲಾಗುತ್ತದೆ ಎಂದು ಸೌದಿ ಅರೇಬಿಯಾದ ಚಂದ್ರನ ವೀಕ್ಷಣೆ ಸಮಿತಿಯು
ಅಧಿಕೃತ ಪ್ರಕಟನೆ ಹೊರಡಿಸಿದೆ.
ಈದುಲ್ ಫಿತ್ರ್ ಹಬ್ಬವನ್ನು ಮಾರ್ಚ್ 30ರ ಭಾನುವಾರದಂದು ಆಚರಿಸಲಾಗುವುದು ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
BREAKING NEWS: Eid Al Fitr 1446/2025 is tomorrow: Sunday, 30 March 2025
— Inside the Haramain (@insharifain) March 29, 2025
The Crescent for the month of Shawwal 1446 was SEEN in Saudi Arabia today subsequently tomorrow is the beginning of the month of Shawwal 1446 pic.twitter.com/6om5sAl38D
ಮುಸ್ಲಿಮರ ಹಿಜರಿ ಕ್ಯಾಲೆಂಡರ್‌ನ ನ ಶವ್ವಾಲ್ 1ನೇ ದಿನದಂದು ಈದುಲ್ ಫಿತ್ರ್ ಅನ್ನು ಆಚರಿಸಲಾಗುತ್ತದೆ. ಇದಕ್ಕೂ ಮೊದಲು ಬರುವ ರಮಝಾನ್ ತಿಂಗಳಲ್ಲಿ ವಿಶ್ವವ್ಯಾಪಿಯಾಗಿ ಮುಸ್ಲಿಮರು ಉಪವಾಸ ಆಚರಣೆ ಮಾಡುತ್ತಾರೆ. ರಮಝಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಗ್ರಂಥ ಕುರ್‌ಆನ್ ಅವತೀರ್ಣಗೊಂಡಿರುವುದರಿಂದ ಪವಿತ್ರ ತಿಂಗಳಾಗಿ ಆಚರಣೆ ಮಾಡುತ್ತಾರೆ.