ಯುಗಾದಿ ದಿನದಂದು ಪುಣ್ಯ ಸ್ನಾನಕ್ಕೆ ತೆರಳಿದ್ದ ಬಾಲಕ ತ್ರಿವೇಣಿ ಸಂಗಮದಲ್ಲಿ ಸಾವನ್ನಪ್ಪರಿವ ಘಟನೆ ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ನಡೆದಿದೆ.
ಶರಣ್(13) ವರ್ಷದ ಬಾಲಕ ಮೃತಪಟ್ಟ ದುರ್ದೈವಿ. ಟಿ ನರಸೀಪುರದ ಶ್ರೀರಾಂಪುರ ನಿವಾಸಿಯಾಗಿದ್ದು, ಇಂದು ಸ್ನೇಹಿತರೊಟ್ಟಿಗೆ ತ್ರಿವೇಣಿ ಸಂಗಮಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಟೋ ಅಮ್ಮನಿಗೆ ಪ್ರತಿಷ್ಠಿತ ‘ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ‘ಪ್ರಶಸ್ತಿ ಗೌರವ
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.