ಬೀದಿನಾಯಿಗಳ ದಾಳಿಗೆ ಐದು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಗ್ರಾಮದಲ್ಲಿ ನಡೆದಿದೆ.
ಸಿದ್ದು ಬೀರಪ್ಪ ಮೃತ ಬಾಲಕ ಎಂದು ಗುರುತಿಸಲಾಗಿದೆ. ತಾಯಿಯು ಬಯಲು ಬಹಿರ್ದೆಸೆಗೆ ತೆರಳಿದಾಗ ಭಾವಿಸಿ ಹಿಂದೆಯೂ ಅಲ್ಲಿಗೆ ಹೋಗುವಾಗ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ಎಳೆದಾಡಿ ಗಂಭೀರ ಗಾಯಗೊಳಿಸಿವೆ ಎನ್ನಲಾಗಿದೆ.
ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿ ಬಾಲಕ ಮೃತಪಟ್ಟಿದ್ದಾನೆಂದು ಹೇಳಲಾಗಿದೆ. ಬಾಲಕನ ಸಾವಿನ ಸುದ್ದಿ ಕೇಳಿ ಇಡೀ ಗ್ರಾಮದ ಆಕ್ರಂದನ ಮುಗಿಲು ಮುಟ್ಟಿದೆ.
ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ರಾಯಚೂರು ತಾಲೂಕಿನ ಮರ್ಚೆಟ್ಹಾಳ್ ಗ್ರಾಮದಲ್ಲಿ ಐದನೇ ತರಗತಿ ವಿದ್ಯಾರ್ಥಿ ಮೇಲೆ ನಾಯಿ ದಾಳಿ ಮಾಡಿದ್ದರಿಂದ ವಿದ್ಯಾರ್ಥಿ ಗಂಭೀರ ಗಾಯಗೊಂಡ ವರದಿಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ತಡವಾಗಿ ಬಿತ್ತನೆಯಾದ ಹಿಂಗಾರು ಬೆಳೆ; ಕಟಾವಿನವರೆಗೆ ಕಾಲುವೆಗೆ ನೀರು ಬಿಡುಗಡೆ
“ಬೀದಿನಾಯಿಗಳ ಹಾವಳಿ ಬಗ್ಗೆ ಹಲವು ಬಾರಿ ಹೋರಾಟ, ಪ್ರತಿಭಟನೆ ನಡೆದರೂ ಕೂಡಾ ಬೀದಿನಾಯಿ ಹಾವಳಿಗೆ ಕಡಿವಾಣ ಹಾಕುವುದಕ್ಕೆ ಆಗುತ್ತಿಲ್ಲ” ಎಂದು ಸಾರ್ವಜನಿಕರ ಬೇಸರ ವ್ಯಕ್ತಪಡಿಸಿದರು.