ಆಗುಂಬೆ ಘಾಟಿಯ ಏಳನೇ ತಿರುವಿನಲ್ಲಿ ರಿನಾಲ್ಟ್ ಟ್ರೈಬರ್ ಕಾರು ಪಲ್ಟಿ ಹೊಡೆದಿದ್ದು ಕಾರಿನಲ್ಲಿದ್ದ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಕಡೆಯಿಂದ ಶಿವಮೊಗ್ಗ ಕಡೆಗೆ ಪ್ರಯಾಣಿಸುತ್ತಿದ್ದ ಕಾರು, ಆಗುಂಬೆ ಘಾಟಿಯ ಏಳನೇ ತಿರುವಿನಲ್ಲಿ ಟಿಪ್ಪರ್ ಅಡ್ಡ ಬಂದ ಪರಿಣಾಮ, ಅಪಘಾತ ತಪ್ಪಿಸಲು ಹೋಗಿ ಕಾರು ತಿರುವಿನಲ್ಲಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ಕಾರಿನ ಮೇಲ್ಭಾಗ ಸಂಪೂರ್ಣವಾಗಿ ಜಖಂಗೊಡಿದ್ದು, ಯಾವುದೇ ಪ್ರಾಣಾಹಾನಿಯಾದ ಬಗ್ಗೆ ವರದಿಯಾಗಿಲ್ಲ.