ಕೇರಳ, ಕರ್ನಾಟಕ ಸೇರಿದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಮಾ.30ರ ರವಿವಾರ ಸಂಜೆ ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಸೋಮವಾರ (ಮಾ.31)ದಂದು ದೇಶಾದ್ಯಂತ ಮುಸಲ್ಮಾನ ಬಾಂಧವರು ಈದುಲ್ ಫಿತ್ರ್ ಹಬ್ಬ ಆಚರಣೆ ಮಾಡಲು ನಿರ್ಧರಿಸಿದ್ದಾರೆ.
ಮಾರ್ಚ್ 29ರ ಶನಿವಾರದಂದು ಚಂದ್ರ ದರ್ಶನವಾಗಿದ್ದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಭಾನುವಾರ(ಮಾ.30)ದಂದು ಆಚರಿಸಲಾಗಿತ್ತು.
ಮುಸ್ಲಿಮರ ಹಿಜರಿ ಕ್ಯಾಲೆಂಡರ್ನ ನ ಶವ್ವಾಲ್ 1ನೇ ದಿನದಂದು ಈದುಲ್ ಫಿತ್ರ್ ಅನ್ನು ಆಚರಿಸಲಾಗುತ್ತದೆ. ಇದಕ್ಕೂ ಮೊದಲು ಬರುವ ರಮಝಾನ್ ತಿಂಗಳಲ್ಲಿ ವಿಶ್ವವ್ಯಾಪಿಯಾಗಿ ಮುಸ್ಲಿಮರು ಉಪವಾಸ ಆಚರಣೆ ಮಾಡುತ್ತಾರೆ. ರಮಝಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಗ್ರಂಥ ಕುರ್ಆನ್ ಅವತೀರ್ಣಗೊಂಡಿರುವುದರಿಂದ ಪವಿತ್ರ ತಿಂಗಳಾಗಿ ಆಚರಣೆ ಮಾಡುತ್ತಾರೆ. ಈದುಲ್ ಫಿತ್ರ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಮಸೀದಿ ಹಾಗೂ ಈದ್ಗಾಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.