ಬೆಳಗಾವಿಯಲ್ಲಿ ಎಂಬಿಎ ವಿದ್ಯಾರ್ಥಿನಿ ಐಶ್ವರ್ಯಾ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರೀತಿಸಿದ ಯುವಕ ಕೈಕೊಟ್ಟು ಮತ್ತೋರ್ವ ಯುವತಿಯ ಕಡೆ ಮೆಲುಕು ಹಾಕಿದ್ದೇ ಈ ದುರ್ಘಟನೆಯ ಹಿಂದಿನ ಮುಖ್ಯ ಕಾರಣವೆಂದು ಪೊಲೀಸರು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.
ಯುವಕನ ಮೋಸವೇ ಮರಣಕ್ಕೆ ಕಾರಣ?
ಮೃತ ಯುವತಿ ಐಶ್ವರ್ಯಾ ಮತ್ತು ಆಕೆಯ ಪ್ರೇಮಿ ಆಕಾಶ್ ಇಬ್ಬರೂ ವಿಜಯಪುರ ಜಿಲ್ಲೆಯ ಚಡಚಣ ಮೂಲದವರಾಗಿದ್ದು, ವಿದ್ಯಾರ್ಥಿ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಆಕಾಶ್ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಬೆಳೆಸಿದ ವಿಷಯ ತಿಳಿದ ನಂತರ, ಇದರಿಂದ ನೊಂದ ಐಶ್ವರ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಕೊನೆಯ ಕ್ಷಣದ ಮೆಸೇಜ್:
ಆತ್ಮಹತ್ಯೆಗೆ ಮೊದಲು ಐಶ್ವರ್ಯಾ ತನ್ನ ಪಿಜಿ ರೂಮಿನಿಂದ ಆಕಾಶ್‌ಗೆ ಮೆಸೇಜ್ ಕಳಿಸಿ, ತನ್ನ ಸಾವಿಗೆ ಆತ ಮತ್ತು ಇನ್ನೊಬ್ಬ ಯುವತಿಯೇ ಕಾರಣ ಎಂದು ಆರೋಪಿಸಿದ್ದಳು. ಈ ಸಂದೇಶ ಕಳುಹಿಸಿದ ತಕ್ಷಣ, ಆಕಾಶ್ ತಕ್ಷಣವೇ ಪಿಜಿ ರೂಮಿಗೆ ಬಂದು ಬಾಗಿಲು ಒಡೆದು, ಆಕೆಯ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಪೊಲೀಸರ ತನಿಖೆ ಮುಂದುವರಿಯುತ್ತಿದೆ:
ಈ ಘಟನೆ ಸಂಬಂಧ ಪೊಲೀಸರು ಆಕಾಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.